LATEST NEWS
ಮಂಗಳೂರು – ರಸ್ತೆ ಬದಿ ಡ್ರಗ್ಸ್ ಮಾರಾಟಕ್ಕೆ ಯತ್ನ ಇಬ್ಬರು ಅರೆಸ್ಟ್

ಮಂಗಳೂರು ಫೆಬ್ರವರಿ 06: ಸಾರ್ವಜನಿಕ ರಸ್ತೆ ಬದಿಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಇಬ್ಬರನ್ನು ಕೇಂದ್ರ ಉಪ ವಿಭಾಗದ ಆ್ಯಂಟಿ ಡ್ರಗ್ ತಂಡ ಅರೆಸ್ಟ್ ಮಾಡಿದೆ.
ಮಾದಕ ವಸ್ತು ಮಾರಾಟವನ್ನು ತಡೆಗಟ್ಟು ನಿಟ್ಟಿನಲ್ಲಿ ರವಿವಾರ ರಾತ್ರಿ ಕಾರ್ಯಾಚರಣೆ ನಡೆಸಿರುವ ತಂಡವುು ನಗರದ ಬಲ್ಮಠ ನ್ಯೂ ರೋಡ್‌ನಲ್ಲಿರುವ ಸಾರ್ವಜನಿಕ ರಸ್ತೆ ಬದಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿದೆ. ಆರೋಪಿಗಳನ್ನು ಅತ್ತಾವರದ ಆದಿತ್ಯ ಕೆ.(29) ಮತ್ತು ಅಡ್ಯಾರ್‌ಪದವಿನ ರೋಹನ್ ಸಿಕ್ವೇರಾ (33) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 50,000 ರೂ. ಮೌಲ್ಯದ 27 ಗ್ರಾಂ ಹೈಡ್ರೋವೀಡ್ ಗಾಂಜಾ, 1 ಲಕ್ಷ ರೂ. ಮೌಲ್ಯದ 2 ಕೆಜಿ 95 ಗ್ರಾಂನ ಗಾಂಜಾ, 8,000 ರೂ. ಮೌಲ್ಯದ ಗಾಂಜಾ ಆಯಿಲ್, 16,800 ರೂ. ಮೌಲ್ಯದ ಎಲ್‌ಎಸ್‌ಡಿ ಹಾಗೂ 2 ಡಿಜಿಟಲ್ ತೂಕ ಮಾಪನಗಳು, ಕೃತ್ಯಕ್ಕೆ ಬಳಸಿದ 90,000 ರೂ. ಮೌಲ್ಯದ 2 ಮೊಬೈಲ್ ಪೋನ್, 20 ಲಕ್ಷ ರೂ. ಮೌಲ್ಯದ ಕಾರು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ ಕೊಲ್ಲಮೊಗ್ರ: ಅರಣ್ಯ ಸಚಿವ ಈಶ್ವರ ಖಂಡ್ರೆ ಭೇಟಿ-ಗ್ರಾಮಸ್ಥರಿಂದ ಅಹವಾಲು ಸ್ವೀಕಾರ ಆರೋಪಿಗಳ ವಿರುದ್ಧ ಬಂದರ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.