LATEST NEWS
ಬಿಯರ್ ಬಾಟಲಿಯಿಂದ ತನ್ನ ಕತ್ತನ್ನು ತಾನೇ ಸೀಳಿಕೊಂಡ ಹೊಟೇಲ್ ಕಾರ್ಮಿಕ
ಉಡುಪಿ ಡಿಸೆಂಬರ್ 074: ಬಿಯರ್ ಬಾಟಲಿಯಿಂದ ಕತ್ತು ಸೀಳಿ ಹೊಟೇಲ್ ಕಾರ್ಮಿಕನೊಬ್ಬನ ಕೊಲೆ ಪ್ರಕರದಲ್ಲಿ ಟ್ವಿಸ್ಟ್ ಸಿಕ್ಕಿದ್ದು. ಆತನೆ ತನ್ನ ಕತ್ತನ್ನು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಮಣಿಪಾಲದ ವಿ.ಪಿ.ನಗರದ ಅನಂತ ಕಲ್ಯಾಣ ನಗರ ಕ್ರಾಸ್‌ನ ರಸ್ತೆಯ ಬದಿಯಲ್ಲಿ ಹೊಟೇಲ್ ಬಾಣಸಿಗ ರೊಬ್ಬರ ಮೃತದೇಹವು ಬಿಯರ್ ಬಾಟಲಿಯಿಂದ ಕತ್ತು ಕೊಯ್ದ ಸ್ಥಿತಿಯಲ್ಲಿ ನಿನ್ನೆ ಕಂಡು ಬಂದಿತ್ತು, ಹೊಟೇಲ್ ಕಾರ್ಮಿಕರಾಗಿದ್ದ ಕಾಸರಕೋಡ ನಿವಾಸಿ ಶ್ರೀಧರ (38) ಮೃತರು. ಬಿಯರ್ ಬಾಟಲಿಯಿಂದ ಕತ್ತು ಸೀಳಿ ಕೊಲೆಗೈದಿರಬಹುದು ಎಂದು ಮೊದಲು ಶಂಕಿಸಲಾಗಿದ್ದು, ಅದರಂತೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆತನೇ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಅದರಂತೆ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ ಎಂದು ಎಸ್‌ಪಿ ಡಾ| ಅರುಣ್ ಕೆ. ಅವರು ತಿಳಿಸಿದ್ದಾರೆ.
ಶ್ರೀಧರ್ ಸಿಂಡಿಕೇಟ್ ಸರ್ಕಲ್‌ನಿಂದ ಕಾಲ್ನಡಿಗೆಯಲ್ಲಿ ಅಗಮಿಸಿದ್ದ ಆತ ಏಕಾಏಕಿ ಕತ್ತು ಸೀಳಿಕೊಂಡಿದ್ದಾನೆ. ಈ ದೃಶ್ಯಾವಳಿಗಳು ಸ್ಥಳೀಯ ಅಂಗಡಿಯೊಂದರ ಸಿಸಿ ಕೆಮರಾದಲ್ಲಿ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.