LATEST NEWS
ಮಣಿಪಾಲ – ನೇಣು ಹಾಕಿಕೊಳ್ಳುವ ವೇಳೆ ಹಗ್ಗ ತುಂಡಾಗಿ ಕೆಳಗೆ ಬಿದ್ದು ಸಾವು
ಮಣಿಪಾಲ ಡಿಸೆಂಬರ್ 31: ವ್ಯಕ್ತಿಯೊಬ್ಬ ನೇಣಿ ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ಹಗ್ಗ ತುಂಡಾಗಿ ಕೆಳಗೆ ಬಿದ್ದು ಗಾಯಗೊಂಡು ಸಾವನಪ್ಪಿದ ಘಟನೆ ಉಡುಪಿ ಬಳಿಯ ಮಣಿಪಾಲದಲ್ಲಿರುವ 80 ಬೆಡಗುಗುಟ್ಟು ಗ್ರಾಮದ ನವಗ್ರಹ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.
ಮೃತರನ್ನು ಮಿಲ್ರಾಯ್ ಎಂದು ಗುರುತಿಸಲಾಗಿದೆ. ಅವರು ವಾಸವಿದ್ದ ಮನೆಯ ಮೊದಲ ಅಂತಸ್ತಿನ ಮೇಲ್ಛಾವಣಿಗೆ ಹಗ್ಗ ಕಟ್ಟಿ ನೇಣು ಬಿಗಿದುಕೊಂಡು ಸಾವಿಗೀಡಾಗಲು ಯತ್ನಿಸಿದ್ದರು. ನೇಣಿ ಬಿಗಿದುಕೊಂಡಾದ ನಂತರ ಒದ್ದಾಡುವಾಗ ಹಗ್ಗ ತುಂಡಾಗಿದೆ. ಆಗ ಅವರು 20 ಅಡಿ ಎತ್ತರಿಂದ ನೆಲಕ್ಕೆ ಬಿದ್ದಿದ್ದಾರೆ. ತಲೆಗೆ ಗಂಭೀರವಾಗಿ ಪೆಟ್ಟಾಗಿ ಅವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ವಿಶೇಷವೆಂದರೆ ಮೃತ ವ್ಯಕ್ತಿ 2018ರಲ್ಲೇ ಆತ ಮರಣದ ನಂತರ ಅಂಗಾಂಗ ದಾನ ಮಾಡುವುದಾಗಿ ನಿರ್ಧರಿಸಿದ್ದರು. ಅದಕ್ಕಾಗಿ ನವದೆಹಲಿಯ ಸಫ್ಜರ್ ಜಂಗ್ ಆಸ್ಪತ್ರೆಯ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು.