LATEST NEWS
ಮಣಿಪಾಲ – ಡೋರ್ ಲಾಕ್ ಆಗಿ ಪ್ಲ್ಯಾಟ್ ನಲ್ಲಿ ಸಿಲುಕಿಕೊಂಡಿದ್ದ ವಿಧ್ಯಾರ್ಥಿನಿ ರಕ್ಷಣೆ

ಮಣಿಪಾಲ ಜುಲೈ 16 : ಪ್ಲ್ಯಾಟ್ ನ ಡೋರ್ ಲಾಕ್ ಆಗಿ ರೂಂನ ಒಳಗೆ ಸಿಲುಕಿಕೊಂಡಿದ್ದ ವಿಧ್ಯಾರ್ಥಿನಿಯನ್ನು ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಮಣಿಪಾಲದಲ್ಲಿ ನಡೆದಿದೆ.
ಕೃತಿ ಗೋಯಲ್(25) ರಕ್ಷಣೆಗೊಳಗಾದ ವಿದ್ಯಾರ್ಥಿನಿ. ಮನೆಯ ಡೋರ್ ಒಳಗಡೆ ಲಾಕ್ ಆದ ಕಾರಣ ಹೊರ ಬರಲಾಗದೇ ಸಿಕ್ಕಿಹಾಕಿಕೊಂಡ ಯುವತಿ, ರಕ್ಷಣೆಗಾಗಿ ಉಡುಪಿ ಜಿಲ್ಲಾ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದ ದಳದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಫ್ಲ್ಯಾಟಿನ 4ನೇ ಮಹಡಿಯಲ್ಲಿ ಸಿಕ್ಕಿ ಹಾಕಿಕೊಂಡ ಯುವತಿಯನ್ನು ಕೊಠಡಿಯ ಹಿಂಭಾಗದ ಕಿಟಕಿ ಒಡೆದು ರಕ್ಷಿಸಿದ್ದಾರೆ.