LATEST NEWS
ಮಣಿಪಾಲ – ಶಾರ್ಟ್ ಸರ್ಕ್ಯೂಟ್ ಗೆ ಕೆಮಿಕಲ್ ಪ್ಯಾಕ್ಟರಿ ಸುಟ್ಟು ಭಸ್ಮ

ಉಡುಪಿ ಎಪ್ರಿಲ್ 17: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕೆಮಿಕಲ್ ಪ್ಯಾಕ್ಟರಿಯೊಂದು ಸಂಪೂರ್ಣ ಸುಟ್ಟು ಭಸ್ಮವಾದ ಗಲಾಟೆ ಮಣಿಪಾಲ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ವೆಷ್ಟೇಕ್ ಎಂಟರ್ಪ್ರೈಸಸ್ ನಲ್ಲಿ ನಡೆದಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣದಿಂದ ರಾತ್ರಿ ಬೆಂಕಿ ಹತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ರಾತ್ರಿ ಹೊತ್ತು ಸಂಭವಿಸಿದ್ದರಿಂದ ಸಂಸ್ಥೆಯಲ್ಲಿ ಕೆಲಸಗಾರರು ಯಾರೂ ಇರಲಿಲ್ಲ. ಹೀಗಾಗಿ ಜೀವಹಾನಿ ತಪ್ಪಿದೆ. ಸಂಸ್ಥೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಸ್ವತ್ತುಗಳು ಸುಟ್ಟು ಭಸ್ಮವಾಗಿವೆ.

ಮುಂಜಾನೆಯವರೆಗೂ ಬೆಂಕಿ ನಂದಿಸುವ ಕಾರ್ಯ ನಡೆದಿದ್ದು, ಇಡೀ ಫ್ಯಾಕ್ಟರಿಗೆ ವ್ಯಾಪಿಸಿದ ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬಂದಿ ಹರಸಾಹಸ ಪಡಬೇಕಾಯಿತು.