DAKSHINA KANNADA
ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟು ನಿಂತ ಲಾರಿ, ಕಿಲೋಮೀಟರ್ ಬ್ಲಾಕ್ ಆದ ಹೆದ್ದಾರಿ, ಪೋಲೀಸ್ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಛೀಮಾರಿ

ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟು ನಿಂತ ಲಾರಿ, ಕಿಲೋಮೀಟರ್ ಬ್ಲಾಕ್ ಆದ ಹೆದ್ದಾರಿ, ಪೋಲೀಸ್ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಛೀಮಾರಿ
ಪುತ್ತೂರು ಡಿಸೆಂಬರ್ 3: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪ ಲಾರಿಯೊಂದು ಹೆದ್ದಾರಿಯಲ್ಲೇ ಕೆಟ್ಟು ನಿಂತ ಪರಿಣಾಮ ಮೂರು ಗಂಟೆಗೂ ಹೆಚ್ಚು ಕಾಲ ರಸ್ತೆ ಬ್ಲಾಕ್ ಆಗಿದೆ.
ಲಾರಿ ಇಂದು ಮುಂಜಾನೆಯೇ ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದರೂ, ಅದನ್ನು ರಸ್ತೆ ಮಧ್ಯೆಯಿಂದ ತೆರವುಗೊಳಿಸುವ ಕಾರ್ಯವನ್ನು ತಕ್ಷಣಕ್ಕೆ ಮಾಡದ ಹಿನ್ನಲೆಯಲ್ಲಿ ಈ ಹೆದ್ದಾರಿಯಲ್ಲಿ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಗಿದೆ.

ಹೆದ್ದಾರಿ ಬ್ಲಾಕ್ ಬಗ್ಗೆ ಪೋಲೀಸರಿಗೆ ಮಾಹಿತಿ ನೀಡಿದರೂ ತಡವಾಗಿ ಆಗಮಿಸಿದ ಪೋಲೀಸರು ರಸ್ತೆಯನ್ನು ಕ್ಲಿಯರ್ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಜನಪ್ರತಿನಿಧಿಗಳು, ಸಚಿವರು ಈ ರೀತಿ ರಸ್ತೆಯ ಬ್ಲಾಕ್ ನಲ್ಲಿ ಸಿಕ್ಕಿಕೊಂಡಾಗ ಕ್ರೇನ್ ತರಿಸಿ ಕೆಟ್ಟು ನಿಂತ ವಾಹನಗಳನ್ನು ತೆರವುಗೊಳಿಸುವ ಪೋಲೀಸರಿಗೆ ಜನಸಾಮಾನ್ಯ ಎಷ್ಟೇ ತೊಂದರೆ ಅನುಭವಿಸಿದರೂ ಸಮಸ್ಯೆಯಿಲ್ಲ ಎನ್ನುವ ಮನೋಸ್ಥಿತಿ ಇರುವುದು ಇಂದಿನ ಘಟನೆಯಿಂದ ತಿಳಿದುಬಂದಿದೆ.
ನಾಲ್ಕೈದು ಕಿಲೋಮೀಟರ್ ನಷ್ಟು ವ್ಯಾಪ್ತಿಯಲ್ಲಿ ವಾಹನಗಳ ಸಾಲು ನಿಂತಿದ್ದರೂ ಕೇವಲ ಎರಡು ಮೂರು ಪೋಲೀಸರನ್ನು ದಟ್ಟನೆ ನಿರ್ವಹಣೆಗೆ ನಿಯೋಜಿಸಿರುವುದು ಪೋಲೀಸರ ತಾರತಮ್ಯದ ಕರ್ತವ್ಯ ಪಾಲನೆಯನ್ನು ಎತ್ತಿ ತೋರಿಸಿದಂತಾಗಿದೆ.