ಮೊಬೈಲ್ ಅಂಗಡಿಗೆ ನುಗ್ಗಿ 1 ಲಕ್ಷ ರೂಪಾಯಿ ಮೌಲ್ಯದ ಮೊಬೈಲ್ ಕಳ್ಳತನ

ಮಂಗಳೂರು ಡಿಸೆಂಬರ್ 3: ದೇರಳಕಟ್ಟೆ ಜಂಕ್ಷನ್‍ನಲ್ಲಿರುವ ಮೊಬೈಲ್ ಅಂಗಡಿಯೊಂದಕ್ಕೆ ಕಳ್ಳರು ನುಗ್ಗಿ ಸುಮಾರು 1 ಲಕ್ಷ ರೂ ಮೌಲ್ಯದ ಹ್ಯಾಂಡ್‍ಸೆಟ್ ಹಾಗೂ ಹತ್ತು ಸಾವಿರ ರೂ. ನಗದು ಕಳ್ಳತನ ಮಾಡಿದ ಪ್ರಕರಣ ರವಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಬೆಳ್ಮ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ನಾಟೆಕಲ್ ಉರುಮಣೆ ಶಾಹಿಲ್ ಶೇಖ್ ಅವರ ಮಾಲಕತ್ವದ ಮೊಬೈಲ್ ಶಾಪ್‍ನಲ್ಲಿ ಈ ಕಳ್ಳತನ ಕೃತ್ಯ ನಡೆದಿದೆ. ಕಳ್ಳರು ಅಂಗಡಿಯ ಹೆಂಚು ತೆಗೆದು ಒಳನುಗ್ಗಿ ಹತ್ತು ಮೊಬೈಲ್ ಸೆಟ್ ಹಾಗೂ ಹತ್ತು ಸಾವಿರ ರೂ ಕಳ್ಳತನ ನಡೆಸಿದ್ದಾರೆ. ಅಂಗಡಿ ಸಿಬ್ಬಂದಿ ಸಿಸಿ ಕ್ಯಾಮರ ಆನ್ ಮಾಡಿಟ್ಟಿದ್ದರೂ ಕಳ್ಳರು ಆಫ್ ಮಾಡಿದ್ದಾರೆ ಎನ್ನಲಾಗಿದೆ.

ಕೊಣಾಜೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಮೊಬೈಲ್ ಅಂಗಡಿಯಲ್ಲಿ ಇದು ಎರಡನೇ ಬಾರಿ ನಡೆಯುತ್ತಿರುವ ಕಳ್ಳತನವಾಗಿದೆ. 2011 ರಲ್ಲಿ ಕಳ್ಳರು ನುಗ್ಗಿ ಸುಮಾರು ಒಂದು ಲಕ್ಷ ರೂ ಮೌಲ್ಯದ ಹ್ಯಾಂಡ್ ಸೆಟ್ ಕಳವು ಮಾಡಿದ್ದರು.

3 Shares

Facebook Comments

comments