Connect with us

  LATEST NEWS

  ಮಣೆ ಮಂಚೊದ ಮಂತ್ರಮೂರ್ತಿ ನಾಟಕ ಲೋಕಾಪರ್ಪಣೆ

  ಮಂಗಳೂರು ಸೆಪ್ಟೆಂಬರ್ 02 : ಕುಂದೇಶ್ವರ ಪ್ರತಿಷ್ಠಾನ ಮಂಗಳೂರು ಘಟಕ ವತಿಯಿಂದ ಸೆಪ್ಟೆಂಬರ್ ೪ರಂದು ಪುರಭವನದಲ್ಲಿ ಶ್ರೀಪ್ರಾಪ್ತಿ ಕಲಾವಿದೆರ್‌ಕುಡ್ಲ ತಂಡದಿಂದ ಪ್ರಶಾಂತ್‌ಸಿ.ಕೆ. ವಿರಚಿತ ಮಣೆ ಮಂಚೊದ ಮಂತ್ರಮೂರ್ತಿ ನಾಟಕ ಉದ್ಘಾಟನಾ ಪ್ರದರ್ಶನ ನಡೆಯಲಿದೆ. ಈ ಸಂದರ್ಭ ತುಳು, ಕೊಂಕಣಿ, ಕನ್ನಡ, ತೆಲುಗು ಸಿನಿಮಾ, ರಂಗಭೂಮಿ ದಿಗ್ಗಜ ಕಲಾವಿದ ಗೋಪಿನಾಥ್‌ಭಟ್‌ಅವರಿಗೆ ಕುಂದೇಶ್ವರ ಕಲಾಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕುಂದೇಶ್ವರ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಜಿತೇಂದ್ರ ಕುಂದೇಶ್ವರ ತಿಳಿಸಿದ್ದಾರೆ.


  ಗೋಪಿನಾಥ್‌ಭಟ್‌ಅವರು ರಂಗಭೂಮಿಯಲ್ಲಿ 100ಕ್ಕೂ ಹೆಚು ಪಾತ್ರ ನಿರ್ವಹಿಸಿ 750ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ. ವೀರಮದಕರಿ ಸಹಿತ 45ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ದಟ್ಸ್ಆಲ್‌ ಯುವರ್‌ ಆನರ್‌ ನಾಟಕಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಗೆದ್ದುಕೊಂಡಿರುವ ಭಟ್‌ಅವರು ಕೊಂಕಣಿ ಅಕಾಡೆಮಿ ಗೌರವ ಪ್ರಸಸ್ತಿಗೂ ಭಾಜನರಾಗಿದ್ದಾರೆ.


  ಸೆಪ್ಟೆಂಬರ್ 4ರಂದು ಸೋಮವಾರ ಸಂಜೆ 6 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಂಸದ ನಳಿನ್‌ಕುಮಾರ್‌ಕಟೀಲ್‌, ಶಾಸಕ ಡಿ.ವೇದವ್ಯಾಸ ಕಾಮತ್‌, ನಿವೃತ್ತ ಸೇನಾಧಿಕಾರಿ ಕ್ಯಾ.ಬ್ರಿಜೇಶ್‌ಚೌಟ, ತೆಲಿಕೆದ ಬೊಳ್ಳಿ ದೇವದಾಸ್‌ಕಾಪಿಕಾಡ್‌, ಕಲಾಮಾಣಿಕ್ಯ ವಿಜಯಕುಮಾರ್‌ಕೊಡಿಯಾಲಬೈಲ್‌, ಯು.ಟಿ.ಫರೀದ್‌ ಫೌಂಡೇಶನ್‌ ಅಧ್ಯಕ್ಷ ಡಾ. ಯು.ಟಿ. ಇಫ್ತಿಕರ್‌, ನಿರ್ಮಾಪಕ ಪ್ರಕಾಶ್‌ ಪಾಂಡೇಶ್ವರ, ಕಲಾವಿದ/ ಪತ್ರಕರ್ತ ವಾಲ್ಟರ್‌ ನಂದಳಿಕೆ, ಪದ್ಮರಾಜ್‌ ಆರ್‌, ಮಾಧವ ನಾಯ್ಕ್‌ ಅಡ್ಯಾರ್‌, ಕುಂಜತ್ತೋಡಿ ವಾಸುದೇವ ಭಟ್‌, ಸಚ್ಚಿದಾನಂದ ಎಡಮಲೆ, ಪಮ್ಮಿ ಕೊಡಿಯಾಲಬೈಲ್‌, ವಿವೇಕಾನಂದ ಸನಿಲ್‌., ಧನರಾಜ್‌ಶೆಟ್ಟಿ ಮೊದಲಾದವರು ಭಾಗವಹಿಸುವರು. ಸೆಪ್ಟೆಂಬರ್ 4ರಂದು ಸಂಜೆ 6 ಗಂಟೆಗೆ ಕಲಾ ಸವ್ಯಸಾಚಿ ಪ್ರಶಾಂತ್‌ಸಿ.ಕೆ. ನಿರ್ದೇಶನದಲ್ಲಿ ಪಾಢ್ದನ ಆಧರಿತ ತುಳು ನಾಟಕ ಮಣೆ ಮಂಚೊದ ಮಂತ್ರಮೂರ್ತಿ ಚೊಚ್ಚಲ ಪ್ರದರ್ಶನ ಆಯೋಜಿಸಲಾಗಿದ್ದು, ಇದೇ ಸಂದರ್ಭ ಹಿರಿಯ ದೈವಾರಾಧಕ ಸೀನಪ್ಪ ಶೆಡ್ಯ ಅವರಿಗೆ ಗೌರವ ಸನ್ಮಾನ ನಡೆಯಲಿದೆ.

  Share Information
  Advertisement
  Click to comment

  You must be logged in to post a comment Login

  Leave a Reply