Connect with us

    LATEST NEWS

    ಡ್ರೋಣ್ ಮೂಲಕ ಮದುಮಗನ ಕೈಗೆ ಬಂತು ಮಾಂಗಲ್ಯ ಸರ…!!

    ಕಾರ್ಕಳ : ಮದುವೆ ಸಂದರ್ಭ ಹುಡುಗನಿಗೆ ಮಾಂಗಲ್ಯ ವನ್ನು ಅರ್ಚಕರು ಅಥವಾ ಸಂಬಂಧಿಕರು ನೀಡವುದು ಮಾಮೂಲಿ ಆದರೆ ಇಲ್ಲಿ ಹುಡುಗನಿಗೆ ಮಾಂಗಲ್ಯ ಸರವನ್ನು ಡ್ರೋಣ್ ನೀಡಿದ್ದು, ಒಂದು ಅಪರೂಪದ ಮದುವೆಗೆ ಸಾಕ್ಷಿಯಾಯಿತು. ಕಾರ್ಕಳದ ಮಿಯಾರುವಿನಲ್ಲಿ ನಡೆದ ಮದುವೆ.

    ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಎಂದು ಹಿರಿಯರು ಹೇಳುವ ಮಾತಾಗಿದೆ. ಆದರೆ ಇಲ್ಲಿ ಮಾಂಗಲ್ಯ ಸರ ಮಾತ್ರ ಆಕಾಶದಿಂದ ದರೆ ಗಿಳಿದು ಬಂದಿದೆ. ಉಡುಪಿ ಜಿಲ್ಲೆಯ ಕಾರ್ಕಳದ ಮೀಯಾರಿನಲ್ಲಿ ನಡೆದ ಕ್ರೈಸ್ತ ಕುಟುಂಬದ ಮೆಲ್ವಿನ್ ಮತ್ತು ವೆನಿಶಿಯಾ ಅವರ ಮದ್ವೆ ಒಂದು ವಿಶೇಷ ಸನ್ನಿವೇಶಕ್ಕೆ ಸುದ್ದಿಯಾಗಿದೆ. ಮದುವೆಯಲ್ಲಿ ಮದು ಮಗನಿಗೆ ಡ್ರೋಣ್ ಮೂಲಕ ತಾಳಿಯನ್ನು ಕೊಡಲಾಗಿದೆ.

     

    ಈ ವಿಡಿಯೋ ಈ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.ಸದ್ಯ  ಈ ವೀಡಿಯೋ ತುಣುಕು  ಸಂಸ್ಕ್ರತಿ – ಸಂಪ್ರದಾಯ ಬಗೆಗಿನ ಪರ ವಿರೋಧದ ಬಗೆಗಿನ ಚರ್ಚೆ ಯನ್ನು ಹುಟ್ಟು ಹಾಕಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *