LATEST NEWS
ಟ್ರಾಫಿಕ್ ದುಬಾರಿ ದಂಡ ಕಟ್ಟಲು ಚೈನ್ ಹಾಗೂ ವಾಚ್ ಅಡವಿಟ್ಟ ವಿಧ್ಯಾರ್ಥಿ
ಟ್ರಾಫಿಕ್ ದುಬಾರಿ ದಂಡ ಕಟ್ಟಲು ಚೈನ್ ಹಾಗೂ ವಾಚ್ ಅಡವಿಟ್ಟ ವಿಧ್ಯಾರ್ಥಿ
ಮಂಗಳೂರು ಸೆಪ್ಟೆಂಬರ್ 19: ಕೇಂದ್ರ ಸರಕಾರ ಮೋಟಾರ ವಾಹನ ಕಾಯ್ದೆಗೆ ತಿದ್ದುಪಡಿ ಮಾಡಿದ ನಂತರ ಹೆಚ್ಚಾದ ದಂಡ ತೆರಲು ಜನರು ಪರದಾಡುವಂತ ಸ್ಥಿತಿಗೆ ಬಂದಿದೆ. ಈಗಾಗಲೇ ದೇಶದಾದ್ಯಂತ ಸಂಚಾರಿ ನಿಯಮ ಪಾಲಿಸದ ವಾಹನ ಸವಾರರಿಗೆ ದುಬಾರಿ ದಂಡ ವಿಧಿಸುತ್ತಿರುವುದು ವರದಿಯಾಗುತ್ತಿದೆ. ದುಬಾರಿ ದಂಡ ವಿಧಿಸಲಾಗದೆ ಕೆಲವರು ವಾಹನವನ್ನೇ ಪೊಲೀಸರಿಗೆ ನೀಡಿ ಹೋಗುತ್ತಿರುವ ಪ್ರಸಂಗಗಳು ನಡೆದಿದೆ.
ಆದರೆ ಮಂಗಳೂರಿನ 21 ವರ್ಷದ ವಿದ್ಯಾರ್ಥಿಯೊಬ್ಬ ಹೆಲ್ಮೆಟ್ ಹಾಕದೇ ಲೈಸೆನ್ಸ್ ಮತ್ತು ಇನ್ಸ್ಯೂರೆನ್ಸ್, ಇಲ್ಲದೆ ತನ್ನ ಚಿಕ್ಕಪ್ಪನ ಬೈಕ್ ಓಡಿಸುವಾಗ ಸಿಕ್ಕಿ ಹಾಕಿಕೊಂಡಿದ್ದಾನೆ.
ವಿದ್ಯಾರ್ಥಿ ಮತ್ತು ಆತನ ಸ್ನೇಹಿತ ಇಬ್ಮಬರು ಹೆಲ್ಮೆಟ್ ಇಲ್ಲದೇ ಹೋಗುತ್ತಿದ್ದರು. ಈ ವೇಳೆ ಪೊಲೀಸರನ್ನು ನೋಡಿದ ಆತ ಪರಾರಿಯಾಗಲು ಯತ್ನಿಸಿ ಕೆಳಗೆ ಬಿದ್ದಿದ್ದಾನೆ.ಈ ವೇಳೆ ಟ್ರಾಫಿಕ್ ಪೊಲೀಸರು, ಆತನ ಬೈಕ್ ಕೀ ತೆಗೆದುಕೊಂಡಿದ್ದಾರೆ. ದಾಖಲಾತಿ ಗಳ ಬಗ್ಗೆ ಕೇಳಿದಾಗ ವಿದ್ಯಾರ್ಥಿ ಬಳಿ ಯಾವುದೇ ದಾಖಲಾತಿಗಳು ಇರಲಿಲ್ಲ, ಹೀಗಾಗಿ 7 ಸಾವಿರ ರು ದಂಡ ಪಾವತಿಸುವಂತೆ ಪೊಲೀಸರು ತಿಳಿಸಿದ್ದಾರೆ, ಈ ವೇಳೆ ಆತನ ಬಳಿ ಹಣವೂ ಇರಲಿಲ್ಲ, ಹಾಗೂ ಬೈಕ್ ಮಾಲೀಕ ಆತನ ಚಿಕ್ಕಪ್ಪ ಸಹಾಯ ಮಾಡಲು ಹಿಂದೇಟು ಹಾಕಿದರು.
ಆದರೆ ವಿಧ್ಯಾರ್ಥಿ ಬಳಿ ಹಣವಿರದ ಕಾರಣ ತನ್ನ ಚಿಕ್ಕಪ್ಮನ ಸಹಾಯ ಕೇಳಿದ್ದಾನೆ, ಆದರೆ ಅವರು ಸಹಾಯ ಮಾಡಲು ನಿರಾಕರಿಸಿದ ಹಿನ್ನಲೆಯಲ್ಲಿ ತನ್ನ ಬಳಿಯಿದ್ದ ಚಿನ್ನದ ಚೈನು ಮತ್ತು ವಾಚ್ ಅಡವಿಟ್ಟು ಹಣ ಪಾವತಿಸಿದ್ದಾನೆ.