KARNATAKA
ಮಂಗಳೂರು : ಹಿಂದೂ ಕಾರ್ಯಕರ್ತನ ಮೇಲೆ ಗೂಂಡಾ ಕಾಯ್ದೆ,ವಿಹೆಚ್‌ಪಿ ಆಕ್ರೋಶ..!
ಮಂಗಳೂರು : ಒಬ್ಬ ಸಾಮಾನ್ಯ ಹಿಂದೂ ಕಾರ್ಯಕರ್ತನ ಮೇಲೆ ಗೂಂಡಾ ಕಾಯ್ದೆ ಜಾರಿ ಮಾಡಿರುವುದಕ್ಕೆ ವಿಶ್ವ ಹಿಂದೂಪರಿಷತ್ ಮತ್ತು ಬಜರಂಗದಳ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿಹೆಚ್‌ಪಿ ನಾಯಕ ಶಿವಾನಂದ ಮೆಂಡನ್ ಲೋಕಸಭಾ ಚುನಾವಣೆ ಹಿನ್ನಲೆ ಗೂಂಡಾ ಕಾಯ್ದೆಯಡಿ ಹಿಂದೂ ಕಾರ್ಯಕರ್ತ ಜಯಪ್ರಶಾಂತ್ ಬಂಧನ ಮಾಡಲಾಗಿದೆ ಈ ಮೂಲಕ ಹಿಂದುತ್ವ ಪರ ಕೆಲಸ ಮಾಡುವವರನ್ನ ದಮನಿಸು ಕಾರ್ಯ ಕಾಂಗ್ರೆಸ್ ಸರ್ಕಾರ ಪೊಲೀಸರ ಮುಖಾಂತರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಒಂದು ಕೇಸ್ಗೆ ಪೊಲೀಸರು ಮೂರು ಎಫ್ಐಆರ್ ದಾಖಲಿಸಿದ್ದಾರೆ. ಈ ಹಿಂದೆ ಸೆಗಣಿ ಹಾಕಿದ್ದಕ್ಕೆ ಪ್ರದೀಪ್ ವಿರುದ್ಧ ಸೆಕ್ಷನ್ 307 ಹಾಕಿದ್ದರು. ಪಾಕ್ ಪರ ಘೋಷಣೆ ಹಾಕಿದ ಆರೋಪಿಗಳ ಮೇಲೆ ಕೇಸ್ ಹಾಕಲ್ಲ. ಆದ್ರೆ ಹಿಂದೂಗಳನ್ನು ದಮನ ಮಾಡುವ ಕೆಲಸ ನಡೀತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು .ಜೈ ಶ್ರೀ ರಾಮ್, ಹನುಮಾನ್ ಚಾಲೀಸ ಪಠಿಸಿದ್ರೂ ಕೇಸ್ ಹಾಕುತ್ತಾರೆ. ಹಾಗಾಗಿ ನಮಗೆ ಹಿಂದೂಗಳ ಪರವಾದ ಸರಕಾರ ಬೇಕು. ನಾವು ಈ ಬಾರಿ ಮನೆಗೆ ಮನೆಗೆ ಹೋಗಿ ಪ್ರಚಾರ ಮಾಡುತ್ತೇವೆ. ನಮ್ಮ ಕೇಂದ್ರದ ಬೈಠಕ್ನಲ್ಲೂ ಈ ಬಗ್ಗೆ ತೀರ್ಮಾನವಾಗಿದೆ. ಈ ಕಾರಣಕ್ಕೆ ನಾವು ಹಿಂದುತ್ವದ ಪರವಾದ ಸರ್ಕಾರವನ್ನ ಗೆಲ್ಲಿಸುತ್ತೇವೆ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ಮಾಡಿದರು.