Connect with us

    DAKSHINA KANNADA

    ಮಂಗಳೂರು : ಪ್ರತಿನಿತ್ಯ ಹಿಂದೂಗಳು ಅಪಮಾನ ಅವಮಾನ ಸಹಿಸುವ ಕಾಲ ಮುಗಿದಿದೆ : ಶರಣ್ ಪಂಪ್‌ವೆಲ್..!

    ಹಿಂದೂ ದೇಶವಾದ ಭಾರತದಲ್ಲಿ ಪ್ರತಿನಿತ್ಯ ಹಿಂದೂಗಳ ಅಪಮಾನ ಅವಮಾನ ಮಾಡುತ್ತಿದ್ದು ಇದಕ್ಕೆ ಉತ್ತರ ನೀಡಲು ಬಜರಂಗದಳ ದೇಶಾದ್ಯಂತ ಶೌರ್ಯ ರಥ ಯಾತ್ರೆ ಆರಂಭಿಸಿದೆ. ದೇಶಕ್ಕಾಗಿ ಹಿಂದೂತ್ವಕ್ಕಾಗಿ ಅನೇಕರು ಹುತಾತ್ಮರಾಗಿದ್ದಾರೆ, ಅವರ ಬಲಿದಾನ ಎಂದಿಗೂ ವ್ಯರ್ಥವಾಗಲು ಬಿಡಲ್ಲ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್​ವೆಲ್ ಗುಡುಗಿದ್ದಾರೆ.

    ಮಂಗಳೂರು : ಹಿಂದೂ ದೇಶವಾದ ಭಾರತದಲ್ಲಿ ಪ್ರತಿನಿತ್ಯ ಹಿಂದೂಗಳ ಅಪಮಾನ ಅವಮಾನವಾಗುತ್ತಿದ್ದು ಇದಕ್ಕೆ ಉತ್ತರ ನೀಡಲು ಬಜರಂಗದಳ ದೇಶಾದ್ಯಂತ ಶೌರ್ಯ ರಥ ಯಾತ್ರೆ ಆರಂಭಿಸಿದೆ. ದೇಶಕ್ಕಾಗಿ ಹಿಂದೂತ್ವಕ್ಕಾಗಿ ಅನೇಕರು ಹುತಾತ್ಮರಾಗಿದ್ದಾರೆ, ಅವರ ಬಲಿದಾನ ಎಂದಿಗೂ ವ್ಯರ್ಥವಾಗಲು ಬಿಡಲ್ಲ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್​ವೆಲ್ ಗುಡುಗಿದ್ದಾರೆ. 

    ವಿಶ್ವ ಹಿಂದು ಪರಿಷತ್​ನ 60ನೇ ವರ್ಷಾಚರಣೆ ಪ್ರಯುಕ್ತ ದೇಶಾದ್ಯಂತ ಯುವ ಸಂಘಟನೆಯಾದ ಬಜರಂಗದಳ ನೇತೃತ್ವದಲ್ಲಿ ಸೆ.25 ರಂದು ಚಿತ್ರದುರ್ಗದಲ್ಲಿ ಆರಂಭವಾದ ಶೌರ್ಯ ರಥ ಯಾತ್ರೆ ಮಂಗಳೂರು ತಲುಪಿ ನಗರದಲ್ಲಿ ಯಶಸ್ವಿ ಸಮಾವೇಶವನ್ನು ನಡೆಸಿತು. ನಗರದ ಕದ್ರಿ ಮೈದಾನಿನಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್​ವೆಲ್ ಶಿವಮೊಗ್ಗ ಘಟನೆ ಮಂಗಳೂರಿನಲ್ಲಿ ಆಗುತ್ತಿದ್ದರೆ ದಂಗೆಕೋರರ ಮೈ ಹುಡಿಯಾಗುತ್ತಿತ್ತು ಎಂದಿದ್ದಾರೆ.

    ಇವತ್ತು ನಮ್ಮ ಹೋರಾಟವನ್ನ ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಶಾಂತಿ ನಿರ್ಮಾಣ ಆಗಬೇಕು ಅಂತ ಈ ಸರ್ಕಾರ ಹೇಳುತ್ತದೆ. ಆದರೆ ಶಿವಮೊಗ್ಗದಲ್ಲಿ ಪೈಗಂಬರರ ಜನ್ಮದಿನಾಚರಣೆ ಹೆಸರಲ್ಲಿ ಕಲ್ಲು ತೂರಲಾಗಿದೆ. ನಮ್ಮ ಕೃಷ್ಣಾಷ್ಟಮಿ, ಚೌತಿಗೆ ಇಂಥ ಘಟನೆ ನಡೆದ ಉದಾಹರಣೆ ಇದೆಯಾ? ಇದು ಔರಂಗಜೇಬನ ಕಾಲವಲ್ಲ. ಜಿಹಾದಿ ನಾಯಿಗಳೇ, ಇದು ನರೇಂದ್ರನ ಕಾಲ ಎಂದು ಆರ್ಭಟಿಸಿದ್ದಾರೆ. ಪ್ರಶಾಂತ್ ಪೂಜಾರಿ ಹತ್ಯೆಯಾದಾಗ ಯಾರೋ ಒಬ್ಬ ಯುವಕ ಜೈಲಲ್ಲಿ ಕೂತು ಚಮಚವನ್ನ ನೆಲಕ್ಕೆ ಬಡೀತಿದ್ದ. ಬಳಿಕ ನಮ್ಮ ಕಾರ್ಯಕರ್ತನ ಬಲಿದಾನಕ್ಕೆ ಪ್ರತೀಕಾರ ಆಗಿತ್ತು. ಆ‌ ಬಲಿದಾನಕ್ಕೆ ಉತ್ತರ ಕೊಡುವ ಕೆಲಸ ಆ ಹಿಂದೂ ಯುವಕ ಮಾಡಿದ್ದ.

    ಮುಂದೆಯೂ ಅಂಥದ್ದೇ ಉತ್ತರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಯುವಕರು ಕೊಡುತ್ತಾರೆ ಎಂದ ಅವರು ಅಧರ್ಮ ಮಾಡಿದವರನ್ನ ಕೊಂದು ಬಿಡು ಅಂತ ಕೃಷ್ಣನೇ ಹೇಳಿದ್ದ. ಹಾಗಾಗಿ ಶ್ರೀಕೃಷ್ಣನ ನೀತಿ ಇಡೀ ಜಗತ್ತನ್ನೇ ಬದುಕಿಸಲಿದೆ ಎಂದರು. ಸಮಾವೇಶದಲ್ಲಿ ಪಾಲ್ಗೊಂಡು ದಿಗ್ಸೂಚಿ ಭಾಷಣ ಮಾಡಿದ ಚಿಂತಕ ಚಕ್ರವರ್ತಿ ಸೂಲಿಬೆಲೆ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ಇತರೆ ಎಡಪಂಥೀಯ ಸರ್ಕಾರಗಳು ಜಾತಿ ಜನಗಣತಿ ವರದಿ ಬಿಡುಗಡೆ ಮಾಡುತ್ತಿದೆ.

    ಜಾತಿ ಗಣತಿ ಮೂಲಕ ಜಾತಿ ಮೂಲಕ ಹಿಂದೂಗಳನ್ನ ಒಡೆಯುವ ಕೆಲಸ ಆಗುತ್ತಿದೆ. ಜಾತಿ ಜಣಗತಿ ವರದಿ ಬಿಡುಗಡೆ ಮಾಡುವವರು‌ ಮುಸಲ್ಮಾನರ ಜಾತಿ ಕೇಳುವ‌ ಕೆಲಸ ಮಾಡುತ್ತಾರಾ? ಸುನ್ನಿ, ಶಿಯಾ ಅನ್ನೋ ಜಾತಿ ವಿಭಜನೆ ಕೆಲಸ ಆಗಲ್ಲ. ಹಾಗಾಗಿ ಸಮಸ್ತ ಹಿಂದೂಗಳು ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕಿದೆ ಎಂದರು. ಭಾರತಕ್ಕೆ ಇವತ್ತು ಮೂರು ಕಡೆಗಳಿಂದ ಆಕ್ರಮಣವಾಗುತ್ತಿದೆ. ಕ್ರೈಸ್ತರು ಹಿಂದೂಗಳನ್ನು ಜಾತಿಯ ಮೂಲಕ ವಿಭಜಿಸಿದರು. ಅಂದು ಬ್ರಿಟಿಷರು ಹಿಂದೂಗಳನ್ನು ಒಡೆದು ಇವತ್ತು ರಾಜಕೀಯ ಪಕ್ಷಗಳು ಮಾಡುತ್ತಿದೆ. ಮುಸ್ಲಿಮರ ಜಾತಿಯನ್ನೂ ಯಾರಾದರೂ ಕೇಳಿದ್ದಾರಾ ಎಂದು ಪ್ರಶ್ನಿಸಿದರು. ಕೆಲವು ಅಯೋಗ್ಯರು ವಿಜಯ ದಶಮಿ ದಿನ ಮಹಿಷಾ ದಸರಾ ಮಾಡಲು ಹೊರಟಿದ್ದಾರೆ.

    ಸಂಸ್ಕೃತಿಯ ಆಧಾರದಲ್ಲಿ ನಮ್ಮನ್ನ ಒಡೆಯುವ ಕೆಲಸ ಆಗುತ್ತಿದೆ. ಹಿಂದಿ ಉತ್ತರ ಭಾರತ, ಕನ್ನಡ ದಕ್ಷಿಣ ಭಾರತ ಅಂತಾ ಬ್ರಿಟಿಷರು ನಮ್ಮನ್ನು ಒಡೆದರು. ಈಗಲೂ ಭಾಷೆಯ ವಿಭಜನೆ ಮುಂದುವರಿದಿದೆ. ಈ ನಾಡಿನಲ್ಲಿ ಮಹಿಷಿಯ ದಸರಾ ಮೂಲಕ ಸಂಸ್ಕೃತಿಯ ಮೂಲಕ ಒಡೆಯುವ ಕೆಲಸವಾಗುತ್ತಿದೆ. ಕ್ರೈಸ್ತರು ನಿರಂತರ ಮತಾಂತರ ಮಾಡುವ ಮೂಲಕ ಒಡೆದರು. ನಮ್ಮ ಮಂದಿರವನ್ನು ಕ್ರೈಸ್ತರು ಕಾಪಿ ಮಾಡಿದರು. ಚರ್ಚ್​ನಲ್ಲಿ ಉರುಳುಸೇವೆ, ರಥಯಾತ್ರೆ, ಗರುಡಕಂಬ ಎಲ್ಲವೂ ಇದೆ. ಇವತ್ತು ಶೌರ್ಯ ತೋರಿಸಿ ಅವರನ್ನು ತಡೆಯುವ ಕೆಲಸವಾಗಬೇಕಾಗಿದೆ ಎಂದರು.

    ಮುಸ್ಲಿಮರು ಲವ್ ಜಿಹಾದ್ ಮೂಲಕ ಹಿಂದೂಗಳನ್ನು ಒಡೆಯುತ್ತಿದ್ದಾರೆ. ಈ ರಾಜ್ಯದ ಸರ್ಕಾರ ಅವರ ಪರವಾಗಿಯೇ ಇದೆ. ರಾಜ್ಯದ ಗೃಹ ಸಚಿವರು ಇದು ಅಲ್ಲಾಹನ ಕೃಪೆಯಿಂದ ಬಂದ ಸರ್ಕಾರ ಅಂತಾರೆ. ರಾಜ್ಯದ ಮುಖ್ಯಮಂತ್ರಿ ಮುಸ್ಲಿಮರ ಅನುದಾನ ಹೆಚ್ಚಿಸಿದರು. ಮಧು ಬಂಗಾರಪ್ಪ ಹಿಂದೂಗಳು ತ್ರಿಶೂಲ ಹಿಡಿದ ಕಾರಣಕ್ಕೆ ಮುಸಲ್ಮಾನರು ತಲವಾರು ಹಿಡಿದರು ಅಂತಾರೆ. ಈ ಸರ್ಕಾರ ಸಣ್ಣ ಸಣ್ಣ ವಿಷಯದಲ್ಲಿ ಎಫ್​ಐಆರ್‌ ಹಾಕುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ ನಡೆಸಿದರು. ಸಮಾವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುತ್ವಕ್ಕಾಗಿ ಹುತಾತ್ಮರಾದ 20 ಮಂದಿ ಹಿಂದೂ ಯುವ ನಾಯಕರ ಭಾವ ಚಿತ್ರಗಳಿಗೆ ಪುಷ್ಪಾರ್ಚಣೆ ಮಾಡಿ ಗೌರವ ಸಲ್ಲಿಸಲಾಯಿತು.

    ಕರಿಂಜೆ ಮುಕ್ತಾನಂದ ಸ್ವಾಮೀಜಿ ಸೇರಿ ಹಲವು ನಾಯಕರು ವೇದಿಕೆಯಲ್ಲಿದ್ದರೆ ಕೆಳಭಾಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಲ್ಲಡ್ಕ ಪ್ರಭಾಕರ ಭಟ್, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಪ್ರೊ ಎಂಬಿ ಪುರಾಣಿಕ್, ಜಗದೀಶ್ ಶೇಣವಾ, ಮೇಯರ್ ಸುಧೀರ್ ಶೆ್ಟಟಿ ಕಣ್ಣೂರು, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷರಾದ HK ಪುರುಷೋತ್ತಮ, ಶೌರ್ಯ ಜಾಗರಣ ರಥಯಾತ್ರೆ ಸ್ವಾಗತ ಸಮಿತಿ ಅಧ್ಯಕ್ಷರಾದ ಗಿರಿಧರ ಶೆಟ್ಟಿ ಮತ್ತಿತರ ಪಧಾಧಿಕಾರಿಗಳು ಉಪಸ್ಥಿತರಿದ್ದರು. ಸಾವಿರಾರು ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗಿದ್ದರು.

    ಸಮಾವೇಶಕ್ಕೂ ಮುನ್ನ  ನಗರದ ಜ್ಯೋತಿ ವೃತ್ತದಿಂದ ಸಮಾವೇಶ ನಡೆಯುವ ಕದ್ರಿ ಮೈದಾನಿನ ವರೆಗೂ ಶೌರ್ಯ ರಥಯಾತ್ರೆಯ ಮೆರವಣಿಗೆ ನಡೆಯಿತು, ಸಾವಿರಾರು ಯುವಕ-ಯುವತಿಯರು ಈ ರಥಯಾತ್ರೆಯ ಮೆರವಣಿಗೆಯಲ್ಲಿ ಉತ್ಸಾಹದಿಂದ ಹೆಜ್ಜೆ ಹಾಕಿದರು.ಈ ವೇಳೆ ಮಂಗಳೂರು ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.

    ಸಮಾವೇಶ ಬಳಿಕ ರಥ ಯಾತ್ರೆ ಮೆರವಣಿಗೆ ಸಾಗಿದ ಹಾದಿಯನ್ನು ಕಾರ್ಯಕರ್ತರು ಗುಡಿಸಿ,ನೀರು ಹಾಕಿ ಸ್ವಚ್ಚಗೊಳಿಸಿ ಮಾದರಿಯಾದರು.

     

    Share Information
    Advertisement
    Click to comment

    Leave a Reply

    Your email address will not be published. Required fields are marked *