DAKSHINA KANNADA
ಆ್ಯಸಿಡ್ ದಾಳಿಯ ಸಂತ್ರಸ್ಥರನ್ನು ಭೇಟಿ ಮಾಡಿ ಧೈರ್ಯ ತುಂಬಿದ ಸ್ಪೀಕರ್ ಯು ಟಿ ಖಾದರ್..!
ಮಂಗಳೂರು : ಜಿಲ್ಲೆಯ ಕಡಬ ಸರಕಾರೀ ಕಾಲೇಜಿನಲ್ಲಿ ಆಸಿಡ್ ದಾಳಿಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರು ವಿದ್ಯಾರ್ಥಿಗಳನ್ನು ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಇದೇ ಸಂದರ್ಭ ಸಂತ್ರಸ್ಥರ ಕುಟುಂಬಸ್ಥರ ಜೊತೆನೂ ಮಾತುಕತೆ ನಡೆಸಿ ಅವರಿಗೆ ಧೈರ್ಯ ತುಂಬಿದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ , ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ ಬಿ ರಿಷ್ಯಂತ್ ಅವರು ಘಟನೆ ಮತ್ತು ಇಲಾಖೆ ಗೈಗೊಂಡ ಕ್ರಮಗಳ ಬಗ್ಗೆ ಸಭಾಧ್ಯಕ್ಷರಿಗೆ ಸಮಗ್ರ ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ ಸಭಾಧ್ಯಕ್ಷರು ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಇದು ಅತ್ಯಂತ ಕಳವಳಕಾರಿ ಹಾಗೂ ಆಘಾತಕಾರಿ ವಿಷಯ,ವಿದ್ಯಾರ್ಥಿಗಳು ಹಾಗು ಯುವ ಜನ ಸಮೂಹದಲ್ಲಿ ಇಂತಹ ವಿಷಯಗಳ ಕುರಿತಾಗಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ.ಯಾವುದೇ ಕಾರಣಕ್ಕೂ ಇನ್ನೊಬ್ಬರ ಮೇಲೆ ಇಂತಹ ಅಪರಾಧ ಎಸಗುವಂತಹ ಮನಸ್ಥಿತಿ ಬೆಳೆಯದಂತೆ ಸರಕಾರ ಹಾಗು ನಾಗರೀಕ ಸಮಾಜ ಎಚ್ಚರ ವಹಿಸಬೇಕಾಗಿದೆ.ವಿದ್ಯಾರ್ಥಿಗಳ ಸಂಪೂರ್ಣ ಚಿಕಿತ್ಸಾ ವೆಚ್ಚ ಸರಕಾರದಿಂದಲೇ ಭರಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರ ಜೊತೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗಿದ್ದು,ಸರಕಾರದಿಂದ ಸೂಕ್ತ ಪರಿಹಾರ ಒದಗಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ ಎಂದು ಯು ಟಿ ಖಾದರ್ ತಿಳಿಸಿದ್ದಾರೆ.