Connect with us

  DAKSHINA KANNADA

  ಆ್ಯಸಿಡ್ ದಾಳಿ – ನಮ್ಮ ವಿಧ್ಯಾರ್ಥಿನಿಯರಿಗೆ ಕೇರಳ ಸರಕಾರ ಪರಿಹಾರ ನೀಡಬೇಕು

  ಪುತ್ತೂರು ಮಾರ್ಚ್ 06: ಕಡಬದಲ್ಲಿ ದ್ವಿತೀಯ ಪಿಯುಸಿ ವಿಧ್ಯಾರ್ಥಿನಿ ಮೇಲೆ ನಡೆದ ಆ್ಯಸಿಡ್ ದಾಳಿ ನಡೆಸಿದ ಆರೋಪಿ ಕೇರಳದ ನಿವಾಸಿಯಾಗಿದ್ದು, ಈ ಹಿನ್ನಲೆ ಕೇರಳ ಸರಕಾರ ವಿಧ್ಯಾರ್ಥಿನಿಯರಿಗೆ ಪರಿಹಾರ ನೀಡಬೇಕೆಂದು ದುರ್ಗಾವಾಹಿನಿ ಆಗ್ರಹಿಸಿದೆ.


  ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರಕರಣವನ್ನು ವಿಶ್ವಹಿಂದೂ ಪರಿಷತ್, ದುರ್ಗಾವಾಹಿನಿ ಖಂಡಿಸಿದ್ದು, ಆರೋಪಿ ಅಬಿನ್ ಸಿಬಿ ಕೇರಳ ಮೂಲದವನಾಗಿದ್ದು, ಈ ಹಿಂದೆ ಕರ್ನಾಟಕ ರಾಜ್ಯ ಸರಕಾರ ಆನೆ ದಾಳಿಯಲ್ಲಿ ಸಾವನಪ್ಪಿದ ಕೇರಳದವರಿಗೆ ಪರಿಹಾರ ನೀಡಿದೆ. ಆ ರೀತಿಯಲ್ಲಿ ಇದೀಗ ಕೇರಳ ಸರಕಾರವೂ ವಿದ್ಯಾರ್ಥಿನಿಯರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಕೃತ್ಯ ನಡೆದ ಸ್ಥಳವಾದ ಕಡಬ ಪದವಿ ಪೂರ್ವ ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದ್ದು ಕಾಲೇಜಿಗೆ ಸರಿಯಾದ ಆವರಣ ಗೋಡೆ ಇಲ್ಲ, ಅಲ್ಲದೆ ಆವರಣ ಗೋಡೆ ನಿರ್ಮಿಸುವಂತೆ ಹಲವು ಬಾರಿ ಮನವಿ ಮಾಡಲಾಗಿತ್ತು ಆದರೆ ಈವರೆಗೂ ಆವರಣಗೋಡೆ ಮಾಡಿಲ್ಲ, ಕಾಲೇಜಿನಲ್ಲಿ ಭದ್ರತೆಗೆ ಇಲ್ಲಿ ಯಾವುದೇ ಪ್ರಾಮುಖ್ಯತೆ ನೀಡದ ಕಾರಣ ಈ ಕೃತ್ಯ ನಡೆದಿದೆ ಎಂದು ದುರ್ಗಾವಾಹಿ ಆರೋಪಿಸಿದೆ.

  Share Information
  Advertisement
  Click to comment

  You must be logged in to post a comment Login

  Leave a Reply