KARNATAKA
“ಮಂಗಳೂರು ಸ್ಮಾರ್ಟ್ ಸಿಟಿ ಕರೆದವರು ಈ ಗಬ್ಬುನಾತದ ಹತ್ತಿರ ಬಂದು 5 ನಿಮಿಷ ನಿಂತರೆ ನಿಮ್ಮ ಮುಖ ಕಾಣುತ್ತೆ.”
ಮಂಗಳೂರನ್ನು ಸ್ಮಾರ್ಟ್ ಸಿಟಿ ಕರೆದವರು ಗಬ್ಬು ನಾತದ ಹತ್ತಿರ ಬಂದು ಐದು ನಿಮಿಷ ನಿಂತುಕೊಳ್ಳಿ ಕಸದ ರಾಶಿಯಲ್ಲಿ ನಿಮ್ಮ ಮುಖ ನೋಡಬಹುದು.ಈ ತ್ಯಾಜ್ಯದ ಮೇಲೆ ನಡೆದಾಡುವ ಕಾರ್ಮಿಕರು ಡೆಂಗ್ಯೂ, ಮಲೇರಿಯಾ ರೋಗಕ್ಕೆ ತುತ್ತಾಗುತ್ತಿದ್ದಾರೆ.
ಮಂಗಳೂರು : ಬಂದರು ನಗರಿ ಮಂಗಳೂರನ್ನು ಸಾವಿರಾರು ಕೋಟಿ ಸುರಿದು ಸ್ಮಾರ್ಟ್ ಸಿಟಿಯನ್ನಾಗಿ ಮಾಡಲಾಗುತ್ತಿದೆಯಾದ್ರೂ ನಗರದ ಕೊಳಚೆ, ತ್ಯಾಜ್ಯ ವಿಲೆಗೆ ಯಾವುದೇ ಯೋಜನೆಗಳು ಸಮರ್ಪಕಮಾಗಿ ಜಾರಿಯಾಗುತ್ತಿಲ್ಲ.
ಪ್ರತಿ ವರ್ಷ ಮಂಗಳೂರು ಪಾಲಿಕೆ ದೈನಂದಿನ ತ್ಯಾಜ್ಯ ವಿಲೆಗೆ ನೂರಾರು ಕೋಟಿ ಖರ್ಚು ಮಾಡುತ್ತಿದೆ. ಆದ್ರೆ ತ್ಯಾಜ್ಯ ಮಾತ್ರ ಅಲ್ಲೇ ಇರುತ್ತೆ, ಇದೀಗ ಅಂತೂ ಎಲ್ಲೆಂದರಲ್ಲಿ ಕಸ ಬಿಸಾಕಿ ಹೋಗುವ ವ್ಯಾಧಿ ಹೆಚ್ಚಾಗುತ್ತಿದೆ. ಹಸಿ ತ್ಯಾಜ್ಯ ಒಂದು ದಿನ ಮನೆಯಿಂದ ವಿಲೆ ಆಗದಿದ್ದರೆ, ಆ ಕಸ ಮಂಗಳೂರುನ ಬೀದಿ ಬದಿ, ರಸ್ತೆ ಬದಿ ಸರ್ವೇ ಸಾಮಾನ್ಯ, ಪರಿಣಾಮ ಮಲೇರಿಯಾ, ಡೆಂಗಿಯಂತಹ ಮಾರಣಾಂತಿಕ ರೋಗಗಳಿಗೆ ಆಹ್ವಾನ..!
ಕಠಿಣ ಮತ್ತು ಪರಿಣಾಮಕಾರಿ ಕಾನೂನುಗಳು ಇಲ್ಲದರ ಫಲ ಕಸ ಎಲ್ಲೆಂದಲ್ಲಿ ಬೀಸಾಡುವ ಪ್ರವೃತ್ತಿ ಹೆಚ್ಚಾಗಿದೆ. ತ್ಯಾಜ್ಯ ನಿರ್ವಹಣೆಯಲ್ಲೂ ಪಾಲಿಕೆ ಎಡವುತ್ತಿರುವುದು ಸ್ಪಷ್ಟವಾಗಿದೆ. ನಗರದ ಆರ್ಥಿಕತೆಗೆ ಜನ್ಮ ಕೊಟ್ಟ ಹಳೆ ಬಂದರು ಸಗಟು ಮಾರುಕಟ್ಟೆಯ ಪೋರ್ಟ್ ರಸ್ತೆಯಲ್ಲಿ ಕಳೆದ ಕೆಲವು ದಿನಗಳಿಂದ ತ್ಯಾಜ್ಯ ಗುಡ್ಡದ ಹಾಗೇ ರಾಶಿ ಬಿದ್ದಿದೆ. ಸ್ಥಳೀಯರ ಪ್ರಕಾರ ಇಲ್ಲಿ ಎರಡು ತಿಂಗಳಿಂದ ಈ ಟನ್ ಗಟ್ಟಲೆ ತ್ಯಾಜ್ಯ ವಿಲೆ ಆಗದೇ ರಾಶಿ ಬಿದ್ದಿದ್ದು ರಸ್ತೆಯ ಮೇಲೆಲ್ಲಾ ಹರಡಿದೆ. ಮಂಗಳೂರನ್ನು ಸ್ಮಾರ್ಟ್ ಸಿಟಿ ಕರೆದವರು ಗಬ್ಬು ನಾತದ ಹತ್ತಿರ ಬಂದು ಐದು ನಿಮಿಷ ನಿಂತುಕೊಳ್ಳಿ ಕಸದ ರಾಶಿಯಲ್ಲಿ ನಿಮ್ಮ ಮುಖ ನೋಡಬಹುದು.ಈ ತ್ಯಾಜ್ಯದ ಮೇಲೆ ನಡೆದಾಡುವ ಕಾರ್ಮಿಕರು ಡೆಂಗ್ಯೂ, ಮಲೇರಿಯಾ ರೋಗಕ್ಕೆ ತುತ್ತಾಗುತ್ತಿದ್ದಾರೆ. ನಗರ ಪಾಲಿಕೆಯ ನಿರ್ಲಕ್ಷದಿಂದ ಜನ ಮೂಗಿನ ಮೇಲೆ ಬೆರಳಿಟ್ಟು ನಡೆದಾಡಬೇಕಿದೆ. ಇಲ್ಲಿನ ಆರೋಗ್ಯ ನಿರೀಕ್ಷಕನಿಗೆ ಬಡ ಬೀದಿ ವ್ಯಾಪಾರಿಗಳನ್ನು ಓಡಿಸುವ ಕೆಲಸ ಮಾತ್ರ ಗೊತ್ತಿದೆ. ಪಾಲಿಕೆಯ ಸಂಬಂಧಪಟ್ಟವರು 24ಗಂಟೆ ಒಳಗೆ ಕಸ ಎತ್ತದಿದ್ದರೆ ಆರೋಗ್ಯ ನಿರೀಕ್ಷಕನ ಕಚೇರಿಗೆ ಕಸದ ರಾಶಿಯನ್ನು ತಂದು ಸುರಿಯುವ ಕೆಲಸ ಮಾಡಬೇಕಾಗುತ್ತದೆ ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷರಾದ ಬಿಕೆ ಇಮ್ತಿಯಾಝ್ ಎಚ್ಚರಿಕೆ ನೀಡಿದ್ದಾರೆ.