DAKSHINA KANNADA
ಉಳ್ಳಾಲ ಉಚ್ಚಿಲದಲ್ಲಿ ಸಮುದ್ರ ಕೊರೆತ- ರೌದ್ರ ಅಲೆಗಳ ಅಬ್ಬರಕ್ಕೆ ತೀರ ತತ್ತರ..!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಪ್ರಮಾಣ ತೀವ್ರವಾಗಿ ಕುಸಿದಿದ್ದರೂ ಉಳ್ಳಾಲದಲ್ಲಿ ಮತ್ತೆ ಸಮುದ್ರ ಕೊರೆತ ಆರಂಭವಾಗಿದ್ದು ತೀರ ಪ್ರದೇಶವನ್ನು ಸಮುದ್ರದ ರೌದ್ರ ಅಲೆಗಳು ನುಂಗಿ ಹಾಕುತ್ತಿವೆ..
ಉಳ್ಳಾಲ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಪ್ರಮಾಣ ತೀವ್ರವಾಗಿ ಕುಸಿದಿದ್ದರೂ ಉಳ್ಳಾಲದಲ್ಲಿ ಮತ್ತೆ ಸಮುದ್ರ ಕೊರೆತ ಆರಂಭವಾಗಿದ್ದು ತೀರ ಪ್ರದೇಶವನ್ನು ಸಮುದ್ರದ ರೌದ್ರ ಅಲೆಗಳು ನುಂಗಿ ಹಾಕುತ್ತಿವೆ..
ಸುಡು ಬಿಸಿಲ ಮಧ್ಯೆ ಆಗಾಗ ಮಳೆ ಸುರಿಯುತ್ತಿದೆ ಆದರೂ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಮಾಣ ತೀವ್ರವಾಗಿ ಕುಸಿದಿದೆ.
ಈ ನಡುವೆ ಉಳ್ಳಾಲದಲ್ಲಿ ಮತ್ತೆ ಸಮುದ್ರ ಕೊರೆತ ಆರಂಭವಾಗಿದೆ,
ತೀರ ಪ್ರದೇಶವನ್ನು ಸಮುದ್ರದ ರೌದ್ರ ಅಲೆಗಳು ನುಂಗಿ ಹಾಕುತ್ತಿವೆ.
ಉಳ್ಳಾಲದ ಉಚ್ಚಿಲ ಪ್ರದೇಶದಲ್ಲಿ ಅಲೆಗಳ ಅಬ್ಬರ ತುಸು ಜೋರಾಗಿಯೇ ಇದೆ.
ತೀರದ ಮರ ಗಿಡಗಳು, ತೆಂಗಿನ ಮರಗಳು, ತಡೆಗೋಡೆಗಳು ಸಮುದ್ರಕ್ಕೆ ಆಹುತಿಯಾಗುತ್ತಿವೆ.
ಸ್ಥಳಕ್ಕೆ ಸ್ಥಳಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭೇಡಿ ನೀಡಿ ಪರಿಶೀಲನೆ ನಡೆಸಿದ್ದಾರೆ.