Connect with us

  LATEST NEWS

  ನಾನು ಚೈತ್ರಾ ಕುಂದಾಪುರಳಿಗೆ ಯಾವುದೇ ಆಶ್ರಯ ನೀಡಿಲ್ಲ – ಕಾಂಗ್ರೇಸ್ ವಕ್ತಾರೆ ಸುರಯ್ಯ ಅಂಜುಮ್

  ಉಡುಪಿ ಸೆಪ್ಟೆಂಬರ್ 13: ಎಂಎಲ್ಎ ಟಿಕೆಟ್ ಗಾಗಿ ಕೋಟಿಗಟ್ಟಲೆ ಹಣ ಪಡೆದು ವಂಚನೆ ಮಾಡಿದ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಚೈತ್ರಾಳಿಗೆ ನಾನು ನನ್ನ ಮನೆಯಲ್ಲಿ ಆಶ್ರಯ ನೀಡಿಲ್ಲ, ಮಾಧ್ಯಮಗಳಲ್ಲಿ ಬಂದಿರುವ ಸುದ್ದಿ ಸುಳ್ಳು ಎಂದು ಯುವ ಕಾಂಗ್ರೆಸ್ ವಕ್ತಾರೆ ಸುರಯ್ಯ ಅಂಜುಮ್ ಸ್ಪಷ್ಟಪಡಿಸಿದ್ದಾರೆ.


  ವಂಚನೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಹಿಂದೂ ನಾಯಕಿ ಚೈತ್ರಾ ಕುಂದಾಪುರ ಳಿಗೆ ನಾನು ಕಳೆದ ಏಳು ದಿನಗಳಿಂದ ಆಶ್ರಯ ನೀಡಿದ್ದೇನೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಆದರೆ ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಎಫ್ಐಆರ್ ದಾಖಲಾಗಿರುವುದು ಸೆಪ್ಟೆಂಬರ್ 8 ರಂದು. ಹಾಗಾದರೆ ಏಳು ದಿನ ಹೇಗೆ ಆಗುತ್ತೆ ಎಂದು ಪ್ರಶ್ನಿಸಿರುವ ಅವರ ಚೈತ್ರಾ ಮತ್ತು ನಾನು ಹಲವು ವರ್ಷಗಳ ಹಿಂದೆ ನಾನು ಮತ್ತು ಆಕೆ ಸ್ಥಳೀಯ ಸುದ್ದಿ ವಾಹಿನಿಯೊಂದರಲ್ಲಿ ಕೆಲಸ ಮಾಡಿದ್ದೇವೆ.

  ಅದು ಬಿಟ್ಟ ಬಳಿಕ ಆಕೆಯೊಂದಿಗೆ ಯಾವುದೇ ಸಂಬಂಧ ಇರಲಿಲ್ಲ. ಸುದ್ದಿವಾಹಿಗಳಲ್ಲಿ ಬರುತ್ತಿರುವ ಸುಳ್ಳು ಸುದ್ದಿಗಳಿಂದ ನನಗೆ ಮಾನಸಿಕ ಹಿಂಸೆಯಾಗುತ್ತಿದೆ. ಇದರ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply