DAKSHINA KANNADA
ಮಂಗಳೂರು : ಬೋಳೂರು ಚಿತಾಗಾರದಲ್ಲಿ ವಿಭೂತಿ ಧಾರಣೆ ಮಾಡಿದ ನಾಗ ಸಾಧು..!

ಹೊರಪ್ರಪಂಚದಲ್ಲಿ ಜನಸಾಮಾನ್ಯರ ಕಣ್ಣಿಗೆ ಅಪರೂಪವಾಗಿ ಕಾಣಸಿಗುವ ನಾಗ ಸಾಧು ವೊಬ್ಬರು ಮಂಗಳೂರು ನಗರದ ಬೋಳುರು ಚಿತಾಗಾರದಲ್ಲಿ ಕಾಣ ಸಿಕ್ಕಿದ್ದಾರೆ. ಚಿತಾಗಾರಕ್ಕೆ ಆಗಮಿಸಿ ವಿಭೂತಿ ಧಾರಣೆ ಮಾಡಿ ಬಳಿಕ ತೆರಳಿದ್ದಾರೆ.
ಮಂಗಳೂರು : ಹೊರಪ್ರಪಂಚದಲ್ಲಿ ಜನಸಾಮಾನ್ಯರ ಕಣ್ಣಿಗೆ ಅಪರೂಪವಾಗಿ ಕಾಣಸಿಗುವ ನಾಗ ಸಾಧು ವೊಬ್ಬರು ಮಂಗಳೂರು ನಗರದ ಬೋಳುರು ಚಿತಾಗಾರದಲ್ಲಿ ಕಾಣ ಸಿಕ್ಕಿದ್ದಾರೆ. ಚಿತಾಗಾರಕ್ಕೆ ಆಗಮಿಸಿ ವಿಭೂತಿ ಧಾರಣೆ ಮಾಡಿ ಬಳಿಕ ತೆರಳಿದ್ದಾರೆ.

ಈ ಅಪರೂಪದ ನಾಗ ಸಾಧುವನ್ನು ನೋಡಲು ಅನೇಕರು ಬೋಳೂರು ಚಿತಾಗಾರಕ್ಕೆ ಬಂದಿದ್ದರೂ ಹತ್ತಿರ ಹೋಗಲು ಯಾರು ಧೈರ್ಯ ಮಾಡಿರಲಿಲ್ಲ.
ಕೈಲಾಸದ ಶಿವನ ಗಣಗಳೇ ಭೂಮಿಯಲ್ಲಿ ನಾಗಾ ಸಾಧು ಪಂಥಕ್ಕೆ ಪ್ರೇರಣೆ ಎನ್ನಲಾಗುತ್ತದೆ.ತಮ್ಮ ಧರ್ಮ ಹಾಗೂ ದೇಶದ ರಕ್ಷಣೆಗಾಗಿ ಕಾಳಗಕ್ಕಿಳಿಯಲು ಸದಾ ಸಿದ್ಧರಾಗಿರುತ್ತಾರೆ.
ಭರ್ಚಿ, ತ್ರಿಶೂಲಗಳನ್ನು ಅಖಾಡಗಳ ಲಾಂಛನವಾಗಿ ಇಟ್ಟುಕೊಳ್ಳುತ್ತಾರೆ. ಕುಂಭಮೇಳದಲ್ಲಿ ಶಾಹಿಸ್ನಾನಕ್ಕಿಳಿಯುವ ಮುನ್ನ ತ್ರಿಶೂಲವನ್ನು ಪೂಜಿಸಿಯೇ ಹೊರಡುತ್ತಾರೆ.
ಇನ್ನು ನಾಗಾ ಸಾಧುಗಳ ಬದುಕೆಂದರೆ ಕಠಿಣ ವ್ರತಗಳ ಸರಮಾಲೆ. ಮುಳ್ಳಿನ ಮೇಲಿನ ನಡಿಗೆ.
ಮೈ ಪೂರ್ತಿ ನಗ್ನವಾಗಿರುವ ನಾಗಾಗಳೇ ಹೆಚ್ಚು. ದಿನದ ಬಹುಪಾಲು ಒಂಟಿಕಾಲಿನಲ್ಲಿ ನಿಂತಿರುವವರು, ಎಷ್ಟೋ ವರ್ಷಗಳಿಂದ ಒಂದು ಕೈ ಮೇಲೆತ್ತಿ ಹಿಡಿದ ದೀಕ್ಷಿತರು, ಬೇಯಿಸದ ಆಹಾರವನ್ನೂ ಮಾತ್ರ ಜೀವನಪೂರ್ತಿ ತಿನ್ನುವ ವ್ರತಿಗಳು, ದಿನಕ್ಕೊಂದು ಹೊತ್ತು ಮಾತ್ರ ಒಂದು ಮುಷ್ಟಿ ಆಹಾರ ಸೇವಿಸುವವರು, ನೀರು ಕುಡಿದೇ ಬದುಕಿರುವವರು, ಜಟೆಯನ್ನೂ ಉಗುರನ್ನೂ ಕತ್ತರಿಸದೆ ಅಡಿಗಟ್ಟಲೆ ದೂರಕ್ಕೆ ಬೆಳೆಸಿಕೊಂಡವರು, ಆಗಾಗ ಖಡ್ಗದಿಂದ ತಮ್ಮ ದೇಹವನ್ನೇ ನೋಯಿಸಿಕೊಂಡು ‘ಹರಹರ ಮಹಾದೇವ್’ ಎನ್ನುವವರು ಹೀಗೇ ಅನೇಕ ವ್ಯವಿಧ್ಯಮಯ ನಾಗ ಸಾಧುಗಳು ಭಾರತದಲ್ಲಿ ಕಾಣ ಸಿಗುತ್ತಾರೆ.
ಅನ್ಯರೊಡನೆ, ಆಕ್ರಮಣಕಾರಿ ರಾಜರೊಡನೆ ಹೋರಾಡಿದ ಹಿಂದೂ ರಾಜರುಗಳ ಪರ ವಹಿಸಿ ನಾಗಾ ಸಾಧುಗಳು ಕಾದಾಡಿದ ಹಲವು ರೋಚಕ ದಾಖಲೆಗಳಿವೆ.
1664ರಲ್ಲಿ ಮೊಗಲ್ ದೊರೆ ಔರಂಗಜೇಬನ ಸೇನಾಧಿಕಾರಿ ಮಿರ್ಜಾ ಅಲಿ ತುರಂಗ್ ಎಂಬವನು ಕಾಶಿಯ ಮೇಲೆ ದಾಳಿ ಮಾಡಿದಾಗ, ಸಾವಿರಾರು ನಾಗಾ ಸಾಧುಗಳು ಕಾಶಿಯ ವಿಶ್ವನಾಥ ದೇವಸ್ಥಾನದ ರಕ್ಷಣೆಗಾಗಿ ಹೋರಾಡಿ ಪ್ರಾಣ ನೀಡಿದ್ದರು.
1666ರಲ್ಲಿ ಔರಂಗಜೇಬನ ಸೈನ್ಯ ಹರಿದ್ವಾರವನ್ನು ಆಕ್ರಮಿಸಿದಾಗ, ಅದನ್ನು ರಕ್ಷಿಸಲು ನಾಗಾಗಳು ಮುಂದಾಗಿದ್ದರು.