DAKSHINA KANNADA
ಮಂಗಳೂರು : ಟಿಪ್ಪು ಸುಲ್ತಾನ್ ಭಾವಚಿತ್ರದ ಬ್ಯಾನರ್ ತೆರವು ಮಾಡಿದ್ರೆ ಬೀದಿಗಿಳಿದು ಹೋರಾಟ; ಮುನೀರ್ ಕಾಟಿಪಳ್ಳ ಎಚ್ಚರಿಕೆ..!
ಮಂಗಳೂರು : ಡಿವೈಎಫ್ಐ ನ 12 ನೇ ಕರ್ನಾಟಕ ರಾಜ್ಯ ಸಮ್ಮೇಳನ ಪ್ರಯುಕ್ತ ಉಳ್ಳಾಲ ಹರೇಕಳದಲ್ಲಿ ಹಾಕಲಾಗಿದ್ದ ಟಿಪ್ಪು ಸುಲ್ತಾನ್ ಭಾವಚಿತ್ರದ ಬ್ಯಾನರ್ ತೆರವು ಮಾಡಲು ಪೊಲೀಸರು ನೋಟಿಸ್ ಜಾರಿ ಬಗ್ಗೆ ಮಂಗಳೂರಿನಲ್ಲಿ ಡಿವೈಎಫ್ಐ ಮುಖಂಡ ಮುನೀರ್ ಕಾಟಿಪಳ್ಳ ತೀಕ್ಷವಾಗಿ ಪ್ರತಿಕ್ರೀಯಿಸಿದ್ದಾರೆ.
ಟಿಪ್ಪು ಸುಲ್ತಾನ್ ಯಾಕೆ ವಿವಾದ ಆಗ್ತಾ ಇದ್ದಾರೆ ಎಂದು ನಮಗೆ ಗೊತ್ತಾಗ್ತ ಇಲ್ಲ. ಸಮ್ಮೇಳನದ ಪೋಸ್ಟರ್ ಒಂದು ತಿಂಗಳ ಹಿಂದೆಯೇ ಬಿಡುಗಡೆ ಮಾಡಲಾಗಿದ್ದು ಅದರಲ್ಲಿ ಟಿಪ್ಪು ಸುಲ್ತಾನ್, ನಾರಾಯಣ ಗುರು, ಮಹಾತ್ಮಾ ಗಾಂಧಿ, ಚೇಗುವಾರ, ಭಗತ್ ಸಿಂಗ್, ರಾಣಿ ಅಬ್ಬಕ್ಕ,ಕೋಟಿಚೆನ್ನಯ್ಯ,ಅಂಬೇಡ್ಕರ್, ಕುವೆಂಪು ಎಲ್ಲಾರೂ ಇದ್ದಾರೆ. ಆದ್ರೆ ಇಲ್ಲಿ ಟಿಪ್ಪು ಸುಲ್ತಾನ್ ಮಾತ್ರ ಯಾಕೆ ಸಮಸ್ಯೆ ಅಂತ ಗೊತ್ತಾಗ್ತಾ ಇಲ್ಲ. ಟಿಪ್ಪು ರಾಣಿ ಅಬ್ಬಕ್ಕನಂತೆ ಹೋರಾಟ ಮಾಡಿದ್ದಾರೆ. ರಾಣಿ ಅಬ್ಬಕ್ಕ ಪೋರ್ಚುಗೀಸರು ವಿರುದ್ದ ಹೋರಾಡಿದ್ರೆ, ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ರಾಜೀ ಇಲ್ಲದೆ ಹೋರಾಡಿದ್ದು ಯಾಕೆ ಅವರನ್ನು ಗೌರವಿಸಬಾರದು ? ಬಿಜೆಪಿ ಅವರಿಗೆ ಆಗಲ್ಲ ಅಂದಾಕ್ಷಣ ನಾವು ಕೈ ಬಿಡಬೇಕಾ…? ಎಂದು ಮುನೀರ್ ಪ್ರಶ್ನಿ ಮಾಡಿದ್ದಾರೆ. ಈಗಾ ಇರೋದೇನು ತಕರಾರಿರೋದು ಬಿಜೆಪಿ ಅವರಿಗೆ ಮಾತ್ರ. ಟಿಪ್ಪು ಸುಲ್ತಾನ್ ಗೆ ಮಾತ್ರ ತಕರಾರು ಅಲ್ಲ ಕೋಟಿಚೆನ್ನಯ್ಯ ಹಾಕಿದ್ರು ತಕರಾರು ಯಾರನ್ನಾದರೂ ಒಬ್ಬರನ್ನಾದರು ಬಿಡಬೇಕಲ್ಲ ಅವರು. ನಾವು ಯಾರನ್ನು ಗೌರವಿಸಬೇಕು ಏನು ಮಾಡಬೇಕೆಂದು ಬಿಜೆಪಿ ಅವರ ಹುಕುಂ ತೆಗೆದು ಮಾಡಬೇಕಾ ಎಂದು ಪ್ರಶ್ನಿಸಿದ್ದಾರೆ. ಪೋಲಿಸರು ಬ್ಯಾನರ್ ತೆರವಿಗೆ ನೋಟಿಸ್ ನೀಡುವ ಮೊದಲ ಕರೆ ಮಾಡಿದ್ದಾರೆ. ಅದಕೆ ನಾವೂ ಕೂಡ ತೆರವಿಗೆ ಸೂಕ್ತ ಕಾರಣವನ್ನು ಕೇಳಿದ್ದೇವೆ. ಆದ್ರೆ ಅವರಿಗೆ ಅದರ ಮಾಹಿತಿ ಇಲ್ಲ ಸರ್ಕುಲರ್ ಇದೆ ಈ ಬ್ಯಾನರ್ ನಿಂದ ಕಾನೂನು ಸುವ್ಯವಸ್ಥೆ ಸಮಸ್ಯೆ ಆಗುತ್ತೆ ಆದ್ದರಿಂದ ಟಿಪ್ಪು ಸುಲ್ತಾನ್ ಬ್ಯಾನರ್ ಹಾಕುವಂತಿಲ್ಲ ಅಂತಾರೆ. ನಾವು ಬ್ಯಾನರ್ ಅಳವಡಿಕೆಗೆ ಗ್ರಾಮ ಪಂಚಾಯತಿ ಯಿಂದ ಅನುಮತಿ ಪಡೆಯಾಲಾಗಿದೆ. ಟಿಪ್ಪು ಸುಲ್ತಾನ್ ಪ್ಲೆಕ್ಸ್ ಬ್ಯಾನರ್ ಕಂಡಾಗ ಇವ್ರಿಗೆ ಅನುಮತಿ ನೆನಪಾಗೋದಾ…? ಇಷ್ಟೇಲ್ಲ ಅನುಮತಿ ಇಲ್ಲದ ಬ್ಯಾನರ್ ಗಳಿವೆ. ಟಿಪ್ಪು ಬ್ಯಾನರ್ ಹಾಕೋದು ಬಿಜೆಪಿ ಇಷ್ಟ ಇಲ್ಲ ಗಲಾಟೆ ಮಾಡ್ತಾರೆ ಅಂತಾ ಸ್ಪಷ್ಟ ಕಾರಣ ಹೇಳಿ ನಾವೂ ಕೂಡ ರಾಜೀ ಇಲ್ಲದೆ ಹೋರಾಟ ಮಾಡಿದವರು , ನಾವು ಕೂಡಾ ಅಂತಹ ಹೋರಾಟ ಮಾಡುವರು.ಇವರ ಹತ್ತಿರ ಎತ್ತಿಹೊಳೆಗಾಗಿ ರಥಯಾತ್ರೆ ಮಾಡಿ ಇವ್ರ ಸರ್ಕಾರ ಬಂದಾಗ ಕೈ ಬಿಟ್ಟು ಎತ್ತಿನ ಹೊಳೆಗೆ ಗ್ರಾಂಟ್ ಬಿಡುಗಡೆ ಮಾಡಿದ ಬಿಜೆಪಿ ತರ ಆತ್ಮವಂಚನಾ ರಾಜಕಾರಣ ಅಲ್ಲ ನಮ್ಮದು ಎಂದು ಮುನೀರ್ ಕಾಟಿಪಳ್ಳ ಖಾರವಾಗಿ ಉತ್ತರಿಸಿದ್ದಾರೆ.