DAKSHINA KANNADA
ಮಂಗಳೂರು : ಕಾಂಗ್ರೆಸ್ ಮುಖಂಡ ಮಿಥುನ್ ರೈ ಭಾವಚಿತ್ರದ ಫ್ಲೆಕ್ಸ್ ವಿರೂಪಗೊಳಿಸಿದ ಕಿಡಿಗೇಡಿಗಳು..!

ಮಂಗಳೂರು : ಮೂಡಬಿದಿರೆಯಲ್ಲಿ ನಡೆಯಲಿರುವ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ಸ್ವಾಗತ ಕೋರಿ ಹಾಕಲಾದ ಫ್ಲೆಕ್ಸನ್ನು ಕಿಡಿಗೇಡಿಗಳು ಹಾನಿಗೊಳಿದ ಘಟನೆ ನಡೆದಿದೆ.
ಮೂಡುಬಿದಿರೆಯಲ್ಲಿ ಭಾನುವಾರ ನಡೆಯಲಿರುವ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ಸ್ವಾಗತ ಕೋರಿಈ ಫ್ಲೆಕ್ಸ್ ಗಳನ್ನ ಹಾಕಲಾಗಿತ್ತು. ಇದರಲ್ಲಿದ್ದ ಕಾಂಗ್ರೆಸ್ ಮುಖಂಡ, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈಯವರು ಶುಭಕೋರಿದ ಫ್ಲೆಕ್ಸ್‌ಗಳನ್ನು ಕಿಡಿಗೇಡಿಗಳು ಹರಿದು ಹಾನಿಗೊಳಿಸಿದ್ದಾರೆ. ಮಿಥುನ್ ರೈಯವರನ್ನು ಕೇಂದ್ರಿಕರಿಸಿ ಅವರ ಭಾವಚಿತ್ರವಿರುವ ಜಾಗವನ್ನು ಮಾತ್ರ ಕತ್ತರಿಸಿ ತೆಗೆದು ಹಾನಿಗೊಳಿಸಿದ್ದಾರೆ. ಫ್ಲೆಕ್ಸ್ ಹಾನಿಗೊಳಿಸಿದ್ದ ಬಗ್ಗೆ ಮೂಡುಬಿದಿರೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
