DAKSHINA KANNADA
ಮಂಗಳೂರು; ಬಾಲಕಿಯ ಅಪಹರಣ, ಅತ್ಯಾಚಾರ ಪ್ರಕರಣ-ಪೋಕ್ಸೋ ಕಾಯ್ದೆಯಡಿ ಬಂಧಿತ ಆರೋಪಿ ಖುಲಾಸೆ..!

ಮಂಗಳೂರು : ಅಪ್ರಾಪ್ತೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಮಂಗಳೂರಿನ ಮೊದಲನೇ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಎಮ್. ಡಿ. ಇಬ್ರಾರ್ @ ಮುನ್ನ ಖುಲಾಸೆಗೊಂಡ ಆರೋಪಿಯಾಗಿದ್ದಾನೆ. 2019 ರಲ್ಲಿ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು. ಆರೋಪಿಯಾದ ಎಮ್. ಡಿ. ಇಬ್ರಾರ್ @ ಮುನ್ನ ಮೇಲೆ ಭಾರತೀಯ ದಂಡ ಸಂಹಿತೆಯ ಕಲಂ 376 ( 2 ) ಅತ್ಯಾಚಾರ, ಅಪಹರಣ , ಲೈಂಗಿಕ ದೌರ್ಜನ್ಯ ಮತ್ತು ಕಲಂ 3 ( 2 ) ( V ), 3 ( 1 ) (ಡಬ್ಲ್ಯೂ) ( 1 ), ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) 1989 ಕಾಯ್ದೆ ಯಡಿ ದೌರ್ಜನ್ಯ 25 /3/2019 ರಂದು ಉಳ್ಳಾಲ ಪೊಲೀಸ್ ಠಾಣೆಗೆ ದೂರು ದಾಖಲಾಗಿ ಆರೋಪಿಯನ್ನು ಬಂಧಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ಕೈಗೊಂಡ ಉಳ್ಳಾಲ ಠಾಣೆ ತನಿಖಾಧಿಕಾರಿಯು ತನಿಖೆ ನಡೆಸಿ ಮಾನ್ಯ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಸತ್ರ ನ್ಯಾಯಾಲಯ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಘಟನೆ ಸಂಬಂಧ 16 ಸಾಕ್ಷಿಗಳು ವಿಚಾರಣೆಗೆ ಒಳಪಟ್ಟಿದ್ದುವು.ಆರೋಪಿಯ ಪರವಾಗಿ ಹಾಗೂ ಅಭಿಯೋಜಕರ ಪರವಾಗಿ ನ್ಯಾಯಾಲಯದಲ್ಲಿ ವಾದ ಹಾಗೂ ವಿವಾದ ಮಂಡನೆ ಆಗಿದ್ದು, ಅದರಂತೆ ಮಾನ್ಯ ಮೊದಲನೇ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ ಆರೋಪಿ ಹಾಗೂ ಅಭಿಯೋಜಕರ ವಾದ ಪ್ರತಿವಾದ ಬಳಿಕ ಎಲ್ಲಾ ಸಾಕ್ಷಿ ಆಧಾರಗಳನ್ನು ಪರಿಶೀಲಿಸಿ ಅಂತಿಮ ತೀರ್ಪು ನೀಡಿದೆ. ಆರೋಪಿಯ ವಿರುದ್ಧ ಸೂಕ್ತ ಸಾಕ್ಷ್ಯಾಧಾರ ಕೊರತೆಯಿಂದ ಆರೋಪಿಯನ್ನು ಈ ಪ್ರಕರಣದಿಂದ ಆರೋಪಿಯನ್ನು ಖುಲಾಸೆಗೊಳಿಸಿ ಮಾನ್ಯ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಮಂಜುಳ ಇಟ್ಟಿ ರವರು ತೀರ್ಪು ನೀಡಿರುತ್ತಾರೆ. ಆರೋಪಿಯ ಪರವಾಗಿ ವೆರಿಟಾಸ್ ಲೆಗೀಸ್ ಅಸೋಸಿಯೇಟ್ಸ್ ನ ವಕೀಲರಾದ ರಾಘವೇಂದ್ರ ರಾವ್, ಗೌರಿ ಶೆಣೈ ಮತ್ತು ನವ್ಯ ಸಚಿನ್ ವಾದಿಸಿದ್ದರು.
