Connect with us

    DAKSHINA KANNADA

    ಮಂಗಳೂರು : ವಖ್ಫ್ ಬೋರ್ಡ್ ನಿಂದ ಭೂಮಿ ಕಬಳಿಕೆ – ಭೂದಾಖಲೆಗಳನ್ನು ಪರಿಶೀಲಿಸುವಂತೆ ಹಿಂದೂ ಸಮಾಜಕ್ಕೆ ವಿಶ್ವ ಹಿಂದೂ ಪರಿಷದ್ ಕರೆ

    ಮಂಗಳೂರು :  ವಖ್ಫ್ ಬೋರ್ಡ್ ನಿಂದ ಭೂಮಿ ಕಬಳಿಕೆ  ನಡೆಯುತ್ತಿದ್ದು ಭೂದಾಖಲೆಗಳನ್ನು ಪರಿಶೀಲಿಸುವಂತೆ ಸಮಸ್ತ ಹಿಂದೂ ಸಮಾಜಕ್ಕೆ ವಿಶ್ವ ಹಿಂದೂ ಪರಿಷದ್ ಕರೆ ನೀಡಿದೆ.

    ರಾಜ್ಯದ ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರೈತರ ಭೂಮಿ, ಮಠ, ಆಶ್ರಮಗಳ ಜಮೀನು ವಖ್ಫ್ ಆಸ್ತಿಯೆಂದು ಪಹಣಿ (RTC)ನಮೂದಾದ ಬಗ್ಗೆ ವರದಿಗಳು ಕೇಳಿ ಬರುತ್ತಿದೆ. ವಖ್ಫ್ ಬೋರ್ಡ್ ಮತ್ತು ವಖ್ಫ್ ಕಾನೂನು ಮುಖಾಂತರ ದೇಶದಲ್ಲಿ ಲಕ್ಷಾಂತರ ಎಕರೆ ಭೂಮಿಯನ್ನು ಕಬಳಿಕೆ ಮಾಡುವ ಹುನ್ನಾರ ನಡೆಯುತ್ತಿದೆ. ಈ ರೀತಿ ಭೂಮಿ ಕಬಳಿಕೆಯು ನಮ್ಮ ನಮ್ಮ ಜಿಲ್ಲೆಗಳಲ್ಲಿ ನಡೆದಿರಬಹುದು ಆದ್ದರಿಂದ ನಮ್ಮ ನಮ್ಮ ಊರಿನ ದೇವಸ್ಥಾನ, ಮಠ, ಆಶ್ರಮ ಹಾಗೂ ರೈತ ಸಮುದಾಯ ಹಾಗೂ ಇನ್ನಿತರರು ತಮ್ಮ ತಮ್ಮ ಆಸ್ತಿಯ ಪಹಣಿ ತಿಳಿದುಕೊಳ್ಳುವುದು ಸೂಕ್ತ. ದಾಖಲೆಗಳಲ್ಲಿ ಬದಲಾವಣೆಯಾಗಿದ್ದಾರೆ ತಕ್ಷಣ ಜಿಲ್ಲಾಡಳಿತದ ಅಥವಾ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರ ಗಮನಕ್ಕೆ ತರಬಹುದು ಎಂದು ವಿಶ್ವ ಹಿಂದೂ ಪರಿಷದ್ ಹಿಂದೂ ಸಮಾಜಕ್ಕೆ ಕರೆ ನೀಡುತ್ತದೆ. ಭೂಮಿ ಕಬಳಿಕೆಯ ಈ ಷಡ್ಯಂತ್ರದ ವಿರುದ್ಧ ಹಿಂದೂ ಸಮಾಜ ಜಾಗೃತರಾಗಬೇಕಾಗಿದೆ. ಈಗಾಗಲೇ ಕಬಳಿಕೆಯಾದ ಭೂಮಿಯನ್ನು ವಾಪಸು ಪಡೆಯಲು ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್ವೆಲ್ ಪತ್ರಿಕಾ ಪ್ರಕಟಣೆ ಮುಖಾಂತರ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply