LATEST NEWS
ಮಂಗಳೂರು : ಯುವಕರ ಜಾಲಿರೈಡನ್ನು ಮೊಟಕುಗೊಳಿಸಿದ ಕಾಳಿಂಗ ಸರ್ಪ..!

ಶಿವಪ್ರಸಾದ್ ಸ್ನೇಹಿತರಾದ ಪ್ರವೀಣ್ ಮತ್ತು ಅವಿಲ್ ಅವರುಗಳೊಂದಿಗೆ ಒಂದು ಜಾಲಿ ರೈಡ್ ಹೋಗೋಣವೆಂದು ಬೈಕ್ ಗಳನ್ನು ಏರಿ ಕಳಸದಿಂದ ಸಂಸೆಗೆ ಹೊರಟಿದ್ದರು. ಆದರೆ ಮಾರ್ಗ ಮಧ್ಯೆ ಮಳೆಯ ಕಾರಣ ರಸ್ತೆಯೆಲ್ಲ ಕೆಸರಾಗಿ ಸರಾಗ ಪ್ರಯಾಣಕ್ಕೆ ಅಡಚಣೆಯಾಗಿತ್ತು, ತಿಮ್ಮಯ್ಯ ಕಾಂಡಾ ಎಂಬಲ್ಲಿ ತಲುಪುವ ಹೊತ್ತಲ್ಲಿ ಅದೇಕೋ ಆ ಪುಟ್ಟ ಊರಿನ ನಾಯಿಗಳು ಒಂದೇ ಸವನೆ ಬೊಗಳುತಿದ್ದರೆ, ಅಸಹಾಯಕ ವೃದ್ದೆಯೋರ್ವಳು ಚೀರಾಡುತ್ತ ಓಡೋಡಿ ಬಂದು ಸಹಾಯಕ್ಕೆ ಅಂಗಲಾಚಿದ್ದಾಳೆ.
ಮಂಗಳೂರು : ಕಷ್ಟದಲ್ಲಿದ್ದವರಿಗೆ ನೆರವಿನ ಹಸ್ತ ನೀಡುವಾಗ ಇರುವ ಸುಖ, ಆತ್ಮ ಸಂತೃಪ್ತಿ ಬಹುಷ ಬೇರೆ ಯಾವುದರಲ್ಲೂ ಸಿಗುವುದು ಅತೀ ವಿರಳ ಎಂದೇ ಹೇಳಬಹುದು.ಇಂತಹ ಸಂಕಷ್ಟದಲ್ಲಿದ್ದ ಮಹಿಳೆಯ ಕೂಗಿಗೆ ಸ್ಪಂದಿಸುವ ಮೂಲಕ ಮೂವರು ಯುವಕರು ಮಾನವೀಯತೆ ಮೆರೆದಿದ್ದಾರೆ.

ಶಿವಪ್ರಸಾದ್ ಸ್ನೇಹಿತರಾದ ಪ್ರವೀಣ್ ಮತ್ತು ಅವಿಲ್ ಅವರುಗಳೊಂದಿಗೆ ಒಂದು ಜಾಲಿ ರೈಡ್ ಹೋಗೋಣವೆಂದು ಬೈಕ್ ಗಳನ್ನು ಏರಿ ಕಳಸದಿಂದ ಸಂಸೆಗೆ ಹೊರಟಿದ್ದರು. ಆದರೆ ಮಾರ್ಗ ಮಧ್ಯೆ ಮಳೆಯ ಕಾರಣ ರಸ್ತೆಯೆಲ್ಲ ಕೆಸರಾಗಿ ಸರಾಗ ಪ್ರಯಾಣಕ್ಕೆ ಅಡಚಣೆಯಾಗಿತ್ತು, ತಿಮ್ಮಯ್ಯ ಕಾಂಡಾ ಎಂಬಲ್ಲಿ ತಲುಪುವ ಹೊತ್ತಲ್ಲಿ ಅದೇಕೋ ಆ ಪುಟ್ಟ ಊರಿನ ನಾಯಿಗಳು ಒಂದೇ ಸವನೆ ಬೊಗಳುತಿದ್ದರೆ, ಅಸಹಾಯಕ ವೃದ್ದೆಯೋರ್ವಳು ಚೀರಾಡುತ್ತ ಓಡೋಡಿ ಬಂದು ಸಹಾಯಕ್ಕೆ ಅಂಗಲಾಚಿದ್ದಾಳೆ. ಗೊತ್ತಿರದ ಊರಲ್ಲಿ ಈ ಏಕಾಏಕಿ ಸನ್ನಿವೇಶದಿಂದ ತರುಣರು ಆರಂಭದಲ್ಲಿ ಕೊಂಚ ವಿಚಲಿತರಾದ್ರೂ ಬಳಿಕ ಧೈರ್ಯ ಮಾಡಿ ಬೈಕ್ ನಿಲ್ಲಿಸಿ ವೃದ್ದೆಯಲ್ಲಿ ವಿಚಾರಿಸಲಾಗಿ, ತನ್ನ ಮನೆಯಯೊಳಗೆ ಬೃಹತ್ ಹಾವೊಂದು ನುಗಿದ್ದು ಸಹಾಯಕ್ಕಾಗಿ ಬೇಡಿಕೊಂಡಿದ್ದಳು. ಮೂವರು ಯುವಕರು ವೃದ್ದೆಯ ಮಾತು ಕೇಳಿ ಮನೆಯೊಳಗೆ ಹೋಗಿ ನೋಡಿದಾಗ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಮನೆಯ ಅಡಿಗೆ ಕೋಣೆ ಸೇರಿಕೊಂಡಿತ್ತು. ಸಂಜೆಯ ಹೊತ್ತು ಬೇರೆಯಾಗಿತ್ತು.ಕೂಡಲೇ ಸ್ನೇಹಿತ ರಾಕೇಶ್ ಬೋಳಾರ್‌ಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಅವರ ಸಲಹೆಯಂತೆ ಸ್ನೇಕ್ ಅನಿಲ್ ಚಾಮಾಡಿಯನ್ನು ಸಂಪರ್ಕಿಸಿ ಬರಲು ಹೇಳಿದ್ದು, ಸುಮಾರು ಒಂದೂವರೆ ಗಂಟೆಗಳ ಬೈಕ್ ಪ್ರಯಾಣ ಮಾಡಿದ ಸ್ನೇಕ್ ಅನಿಲ್ ಅವರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿ ಸುಮಾರು 2 ವರ್ಷ ಪ್ರಯಾದ 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಮನೆಯೊಳಗಿನಿಂದ ರಕ್ಷಣೆ ಮಾಡಿ ಸುರಕ್ಷಿತವಾಗಿ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ. ಈ ಮೂವರು ಯುವಕರ ಸಕಾಲದ ಸಮಯಪ್ರಜ್ಞೆ, ಸಹಾಯಾಸ್ತ ಕಂಗಾಲಾಗಿದ್ದ ವೃದ್ದೆಯ ಮುಖದಲ್ಲಿ ಧನ್ಯತಾಭಾವ ಮೂಡಿಸಿದ್ರೆ,ಅದೆಲ್ಲೋ ಜಾಲಿ ರೈಡ್ ಹೊರಟಿದ್ದ ಯುವಕರ ಪ್ರಯಾಣ ಕಾಳಿಂಗ ಸರ್ಪ ಮೊಟಕು ಗೊಳಿಸಿತ್ತು ಆದ್ರೆ ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದ ಸಂತೃಪ್ತಿ ಭಾವ ಆ ಮೂವರು ಯುವಕರ ಮೊಗದಲ್ಲಿತ್ತು.