Connect with us

LATEST NEWS

ಮಂಗಳೂರು : ಯುವ ಜನಾಂಗವನ್ನು ಬಲಿ ಪಡೆಯುತ್ತಿರುವ ಮಾದಕ ದ್ರವ್ಯ ಸೇವನೆ , ಮಾರಾಟ ನಿರ್ಮೂಲನೆಗೆ ಪಣ ತೊಟ್ಟ ಕಸಬಾ, ತೋಟಬೆಂಗರೆ ಮಹಾಜನ..!

ಮಂಗಳೂರು : ಯುವ ಜನಾಂಗವನ್ನು ಬಲಿ ಪಡೆಯುತ್ತಿರುವ ಮಾದಕ ದ್ರವ್ಯ ಸೇವನೆ , ಮಾರಾಟ ನಿರ್ಮೂಲನೆಗೆ  ಮಂಗಳೂರಿನ  ಕಸಬಾ, ತೋಟಬೆಂಗರೆಯ  ಜನರು ಪಣತೊಟ್ಟಿದ್ದಾರೆ.

ಕಸಬ ಬೆಂಗರೆ ಮತ್ತು ತೋಟ ಬೆಂಗರೆ ಯ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಇತ್ತೀಚಿನ ದಿನಗಳಲ್ಲಿ ಅಧಿಕಗೊಳ್ಳುತ್ತಿರುವ ಮಾದಕದ್ರವ್ಯ ಸೇವನೆ ಮತ್ತು ಮಾರಾಟವನ್ನು ನಿರ್ಮೂಲನೆ ಮಾಡುವ ಕುರಿತು ಚರ್ಚಿಸಲಾಯಿತು. ತೋಟ ಬೆಂಗರೆ ಮಹಾಜನ ಸಭೆಯ ಅಧ್ಯಕ್ಷರಾದ ಚೇತನ್ ಬೆಂಗರೆ ಮಾತನಾಡಿ ನಮ್ಮ ಊರಿನ ಯುವಕರು ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಇದನ್ನು ನಾವು ತಡೆಗಟ್ಟಬೇಕು. ಈ ಹಿಂದೆ ಹೋರಾಟ ಸಮಿತಿ ಎಂಬ ಹೆಸರಿನಲ್ಲಿ ಬೆಂಗರೆ ಪ್ರದೇಶದಲ್ಲಿ ಹಲವಾರು ಹೋರಾಟಗಳನ್ನು ಗ್ರಾಮಾಭಿವೃದ್ದಿ ಕಾರ್ಯಗಳನ್ನು ಮಾಡಲಾಗಿತ್ತು. ಅದೇ ಹೋರಾಟ ಸಮಿತಿಯನ್ನು ಪುನರ್ ಸ್ಥಾಪಿಸಿ ಮಾದಕ ವ್ಯಸನ ಮುಕ್ತ ಗ್ರಾಮವನ್ನಾಗಿ ಮಾಡಬೇಕು ಎಂದು ಹೇಳಿದರು. ಅದೆ ರೀತಿ ಕಸಬಾ ಬೆಂಗರೆ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಬಿಲಾಲ್ ಮೊಯ್ದೀನ್ ರವರು ಮಾತನಾಡಿ ಎರಡು ಊರಿನವರು ಪರಸ್ಪರ ಸೌಹಾರ್ದತೆಯಿಂದ ಬಾಳುತ್ತಿದ್ದೇವೆ. ನಮ್ಮ ಊರಿನ ಮಹಾಮಾರಿಯಾಗಿರುವ ಮಾದಕದ ವಿರುದ್ದ ನಾವೆಲ್ಲರೂ ಒಗ್ಗಟ್ಟಾಗಿ ಐಕ್ಯತೆಯಿಂದ ಹೋರಾಟ ಮಾಡೋಣ. ಹೋರಾಟ ಸಮಿತಿಯನ್ನು ಪುನರ್ ಸ್ಥಾಪಿಸೋಣ. ನಮ್ಮ ಜಮಾಅತ್ ನಿಂದ ಇದಕ್ಕೆ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.

ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಮುನೀಬ್ ಬೆಂಗರೆಯವರು ಈ ಸತ್ಕಾರ್ಯಕ್ಕೆ ಬೆಂಬಲ ವ್ಯಕ್ತ ಪಡಿಸಿದರು. ಪ್ರಸ್ತುತ ಸಭೆಯಲ್ಲಿ ತೋಟ ಬೆಂಗರೆ ಫೇರಿ ಅಧ್ಯಕ್ಷರಾದ ನವೀನ್ ಸುವರ್ಣ, ಮಹಾಜನ ಸಭೆಯ ಜೊತೆ ಕಾರ್ಯದರ್ಶಿ ಸಚಿನ್ ಬೆಂಗರೆ, ಮಾಜಿ ಅಧ್ಯಕ್ಷರಾದ ನವೀನ್ ಕರ್ಕೇರ, ಸದಸ್ಯರುಗಳಾದ ಚಂದ್ರಹಾಸ, ಸಂಜಯ್ ಸುವರ್ಣ, ವಿತುನ್ ಚಂದನ್, ಸುರೇಶ್ ಸುವರ್ಣ, ಮಹಾಜನ ಸಭೆಯ ಕ್ಲರ್ಕ್ ಸಂಜಯ್ , ಬೆಂಗರೆ ಜಮಾಅತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಕಬೀರ್, ಕೋಶಾಧಿಕಾರಿ ಹನೀಫ್ ಹಾಜಿ, ಬಿ.ಎಂ.ಡಿ ಡೈರೆಕ್ಟರ್ ಸಿದ್ದೀಕ್, ಗುಲ್ಝಾರ್, ಕಬೀರ್ ಮಸೀದಿ ಉಸ್ತುವಾರಿಗಳಾದ ಕುಂಙಾಲಿ, ಲತೀಫ್ , ಎ.ಎಂ.ಡಿ ಮ್ಯಾನೆಜರ್ ನಿಸಾರ್ ಅಹ್ಮದ್ ಉಪಸ್ಥಿತರಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *