Connect with us

  KARNATAKA

  ಮಂಗಳೂರು : ಭವ್ಯವಾದ ‘ಸ್ವರ್ಣ ಲಾಲ್ಕಿ’ಯ ವೈಭವದ ಪುರ ಪ್ರವೇಶ..!

  ಮಂಗಳೂರು : ಮಂಗಳೂರು ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ದೇವರ ಮಹೋತ್ಸವ ಕಾರ್ಯಕ್ರಮಕ್ಕೆ ನೂತನವಾಗಿ ನಿರ್ಮಿಸಲಾದ ಸ್ವರ್ಣ ಲಾಲ್ಕಿ ಯ ಭವ್ಯ ” ಪುರ ಪ್ರವೇಶ ” ಕಾರ್ಯಕ್ರಮ ಶುಕ್ರವಾರ ವಿಜ್ರಂಭಣೆಯಿಂದ ನಡೆಯಿತು.

  ಸಂಘನಿಕೇತನದಿಂದ ಪ್ರಾರಂಭಗೊಂಡು ಮಣ್ಣಗುಡ್ಡ, ಕುದ್ರೋಳಿ, ರಥಬೀದಿ ಮೂಲಕ ಶ್ರೀ ದೇವಳಕ್ಕೆ ವಿಜೃಂಭಣೆಯಿಂದ ‘ಸ್ವರ್ಣ ಲಾಲ್ಕಿ’ ತರಲಾಯಿತು. ಸುಮಾರು 35 ಕೆಜಿ ಬಂಗಾರ , 70 ಕೆಜಿ ಬೆಳ್ಳಿಯಿಂದ ನಿರ್ಮಾಣ ಮಾಡಲಾದ ಈ ಸ್ವರ್ಣ ಪಲ್ಲಕಿಯನ್ನು ಬ್ರಹ್ಮರಥೋತ್ಸವದ ಹಿಂದಿನ ದಿನ ನಡೆಯುವ ಶ್ರೀ ದೇವರ ಮೃಗಬೇಟೆ ಉತ್ಸವದಂದು ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಸಮರ್ಪಿಸಲಾಗುವುದು .

  ಈ ಸ್ವರ್ಣ ಲಾಲ್ಕಿ ಯನ್ನು ಸೇವಾರೂಪದಲ್ಲಿ ಕೊಡುಗೈ ದಾನಿ ಡಾ . ಪಿ . ದಯಾನಂದ ಪೈ ಕುಟುಂಬಸ್ಥರು ಹಾಗೂ ಹತ್ತು ಸಮಸ್ತರ ಸೇವಾರೂಪದಲ್ಲಿ ನೀಡಲಾದ ಸ್ವರ್ಣ ಮತ್ತು ರಜತದಿಂದ ಸಮರ್ಪಿಸಲಾಗಿದೆ .

  ಈ ಸಂದರ್ಭದಲ್ಲಿ ಡಾ . ಪಿ . ದಯಾನಂದ ಪೈ , ಶ್ರೀಮತಿ ಮೋಹಿನಿ ದಯಾನಂದ ಪೈ , ದೇವಳದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ , ಸಾಹುಕಾರ್ ಕಿರಣ್ ಪೈ , ಸತೀಶ್ ಪ್ರಭು , ಕೆ . ಗಣೇಶ್ ಕಾಮತ್ , ಎಂ . ಜಗನ್ನಾಥ್ ಕಾಮತ್ , ತಂತ್ರಿಗಳಾದ ಪಂಡಿತ್ ನರಸಿಂಹ ಆಚಾರ್ಯ , ಪಂಡಿತ್ ಕಾಶೀನಾಥ್ ಆಚಾರ್ಯ , ಉದ್ಯಮಿ ಸುರೇಶ ವಿ ಕಾಮತ್ , ಶಾಸಕ ಡಿ ವೇದವ್ಯಾಸ್ ಕಾಮತ್ ಹಾಗೂ ಸಮಾಜದ ಸಹಸ್ರಾರು ಅಬಾಲವೃದ್ದ ಸ್ತ್ರೀ ಪುರುಷರು ಉಪಸ್ಥಿತರಿದ್ದರು.

  Share Information
  Advertisement
  Click to comment

  You must be logged in to post a comment Login

  Leave a Reply