Connect with us

LATEST NEWS

ಮಂಗಳೂರು : ಹಫ್ತಾ ವಸೂಲಿ ಹೆಸರಲಿ ಕಿರುಕುಳ, ನೀಡಿದ ಬಿಜೆಪಿ ಮುಖಂಡನ ನಡೆಗೆ DYFI ಖಂಡನೆ – ಅಂಗವಿಕಲ ಬೀದಿ ವ್ಯಾಪಾರಿಗೆ ಬೆಂಬಲ..!

ಮಂಗಳೂರು : ಮಂಗಳೂರಿನ ಪಡೀಲ್ ಮುಖ್ಯ ರಸ್ತೆಯ ಬಳಿ ಕಳೆದ ಹಲವು ವರುಷಗಳಿಂದ ಹೂ ಮಾರಿ ಬೀದಿ ವ್ಯಾಪಾರ ಮಾಡುವ ಮೂಲಕ ಜೀವನ ನಿರ್ವಹಿಸುತ್ತಿರುವ ಚಂದ್ರಹಾಸ್ ಪೂಜಾರಿ ಎಂಬವರಿಗೆ ಕಳೆದ ಕೆಲವು ದಿನಗಳಿಂದ ಹಫ್ತಾ ಹೆಸರಿನಲ್ಲಿ ಕಿರುಕುಳ  ನೀಡುತ್ತಿರುವುದಲ್ಲಿ DYFI  ತೀವ್ರ ಆಕ್ರೋಶ ವ್ಯಕ್ತ ಪಡಿಸಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಡಿವೈಎಫ್ಐ ನಿಯೋಗ ಸಂತ್ರಸ್ತ ಚಂದ್ರಹಾಸ್ ಪೂಜಾರಿಯ ಗೂಡಂಗಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಾನು ಎದುರಿಸುತ್ತಿರುವ ಸಮಸ್ಯೆಗಳನ್ನು ತೋಡಿಕೊಂಡಿದ್ದಾರೆ.ಪಡೀಲ್ ಬಳಿ ಗೂಡಂಗಡಿಯಲ್ಲಿ ಹೂ ಮಾರಿಕೊಂಡು ಬೀದಿ ವ್ಯಾಪಾರ ನಡೆಸುತ್ತಿರುವ ಚಂದ್ರಹಾಸ ಪೂಜಾರಿ ಶೇಕಡಾ 75% ಅಂಗ ವೈಕಲ್ಯವನ್ನು ಹೊಂದಿರುತ್ತಾರೆ. ತನ್ನ ಎರಡೂ ಕಾಲುಗಳಲ್ಲಿ ಬಲಕಳೆದುಕೊಂಡು ನಡೆದಾಡದ ಸ್ಥಿತಿಯಲ್ಲಿರುವ ಇವರು ತನ್ನ ಸ್ವಾವಲಂಭಿ ಬದುಕಿಗಾಗಿ ಕಳೆದ ಐದಾರು ವರುಷಗಳಿಂದ ಬೀದಿ ವ್ಯಾಪಾರದಲ್ಲಿ ತೊಡಗಿಸಿಕೊಂಡು ತನ್ನ ಜೀವನ ಬದುಕನ್ನು ಸಾಗಿಸಿಕೊಂಡಿರುತ್ತಾರೆ. ಈ ನಡುವೆ ಸ್ಥಳಿಯ ಬಿಜೆಪಿ ನಾಯಕ ಮಾಜಿ ಕಾರ್ಪೊರೇಟರ್ ಓರ್ವರು  ಚಂದ್ರಹಾಸ ಪೂಜಾರಿ ಅಂಗಡಿ ತೆರವಿಗೆ ಒತ್ತಡವನ್ನು ಹೇರುತ್ತಿದ್ದು ನಾನಾ ರೀತಿಯಲ್ಲಿ ಮಾನಸಿಕ ಕಿರುಕುಳ ನೀಡುತ್ತಿರುವ ಬಗ್ಗೆ ಡಿವೈಎಫ್ಐ ನಿಯೋಗದಲ್ಲಿ ದೂರಿದ್ದಾರೆ.  ಆತನ ಹಿಂಬಾಲಕರು ಹಫ್ತಾ ವಸೂಲಿಗೂ ಬಂದು ಕಿರುಕುಳ ನೀಡುತ್ತಿರುವ ಬಗ್ಗೆ ಮಾನಸಿಕವಾಗಿ ನೊಂದಿಕೊಂಡು ತಾನು  ಎದುರಿಸುತ್ತಿರುವ ಸಮಸ್ಯೆಗಳನ್ನು ವಿಡಿಯೋ ಮೂಲಕ ದಾಖಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಅವರು ಆತನನ್ನು ಸ್ಥಳೀಯ ಠಾಣೆಗೆ ಎಳೆದು ಮಟ್ಕ ಕೇಸಿಲ್ಲಿ ಸಿಲುಕಿಸಿ ಕೇಸು ದಾಖಲಿಸುವ ಮತ್ತು ಬೇರೆ ಬೇರೆ ರೀತಿಯ ಜೀವ ಬೆದರಿಕೆಯನ್ನು ಒಡ್ಡುತ್ತಿದ್ದಾರೆ. ಕಷ್ಟಪಟ್ಟು ದುಡಿದು ತಿನ್ನುವ ಅಮಾಯಕ ಬೀದಿ ವ್ಯಾಪಾರಿ ಚಂದ್ರಹಾಸ್ ಪೂಜಾರಿಯನ್ನು ವಿನಾ ಕಾರಣ ಬೆದರಿಸುತ್ತಿರುವ  ಮಾಜಿ ಕಾರ್ಪೊರೇಟರ್ ನಡೆಯನ್ನು ಡಿವೈಎಫ್ಐ ಖಂಡಿಸುತ್ತದೆ ಮತ್ತವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸುತ್ತದೆ. ಈ ತರಹದ ಕಿರುಕುಳ ಮುಂದುವರಿದರೆ ಡಿವೈಎಫ್ಐ ಅಂಗವಿಕಲ ಚಂದ್ರಹಾಸ ಪೂಜಾರಿ ಜೊತೆ ನಿಲ್ಲುತ್ತದೆ ಎಂದು ಡಿವೈಎಫ್ಐ ನಿಯೋಗ ಧೈರ್ಯ ತುಂಬಿ ಮಾತನಾಡಿಸಿದೆ. ನಿಯೋಗದಲ್ಲಿ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಡಿವೈಎಫ್ಐ ನಗರ ಅಧ್ಯಕ್ಷರಾದ ಜಗದೀಶ್ ಬಜಾಲ್, ಮುಖಂಡರಾದ ದೀಪಕ್ ಬಜಾಲ್, ವರಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *