LATEST NEWS
ಮಂಗಳೂರು ಮಹಾನಗರಪಾಲಿಕೆ ನೂತನ ಮೇಯರ್ ಆಗಿ ದಿವಾಕರ್, ಉಪಮೇಯರ್ ವೇದಾವತಿ ಆಯ್ಕೆ
ಮಂಗಳೂರು ಮಹಾನಗರಪಾಲಿಕೆ ನೂತನ ಮೇಯರ್ ಆಗಿ ದಿವಾಕರ್, ಉಪಮೇಯರ್ ವೇದಾವತಿ ಆಯ್ಕೆ
ಮಂಗಳೂರು ಫೆ.28: ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮುಗಿದಿದ್ದು ಮೇಯರ್ ಆಗಿ ಬಿಜೆಪಿ ಹಿರಿಯ ಸದಸ್ಯ ದಿವಾಕರ ಪಾಂಡೇಶ್ವರ ಆಯ್ಕೆಗೊಂಡಿದ್ದಾರೆ. ದಿವಾಕರ್ ಅವರು ಪಾಲಿಕೆಯ 21ನೇ ಅವಧಿಯ ಮೇಯರ್ ಆಗಿದ್ದು 46ನೇ ಕಂಟೋನ್ಮೆಂಟ್ ವಾರ್ಡ್ ನ ಕಾರ್ಪೋರೇಟರ್ ಆಗಿದ್ದಾರೆ. ಇನ್ನು ಬಿಜೆಪಿಯ ವೇದಾವತಿ ಉಪ ಮೇಯರ್ ಆಗಿ ಆಯ್ಕೆಯಾಗಿದ್ದು ಇವರು 9ನೇ ಕುಳಾಯಿ ವಾರ್ಡ್ ಕಾರ್ಪೋರೇಟರ್ ಆಗಿದ್ದಾರೆ.
60 ವಾರ್ಡ್ ಗಳಲ್ಲಿ 44 ಸಂಖ್ಯಾಬಲ ಹೊಂದಿದ್ದ ಬಿಜೆಪಿಗೆ ಕಾಂಗ್ರೆಸ್ ಎಲ್ಲೂ ಸವಾಲಾಗಲಿಲ್ಲ. ಹಿಂದುಳಿದ ವರ್ಗ ಎ ಮೀಸಲಾತಿ ಹೊಂದಿದ್ದ ಮೇಯರ್ ಸ್ಥಾನಕ್ಕೆ ಮೂರು ಬಾರಿ ಕಾರ್ಪೊರೇಟರ್ ಆಗಿ ಆಯ್ಕೆಯಾದ ದಿವಾಕರ್ ಪಾಂಡೇಶ್ವರ್ ಆಯ್ಕೆಯಾದ್ರೆ, ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಮೇಯರ್ ಸ್ಥಾನಕ್ಕೆ ವೇದಾವತಿ ಆಯ್ಕೆಯಾದರು.
ಇನ್ನು ಬಿಜೆಪಿಗೆ ಶಾಸಕದ್ವಯರಾದ ವೇದವ್ಯಾಸ ಕಾಮತ್ ಹಾಗೂ ಡಾ.ಭರತ್ ಶೆಟ್ಟಿ ಹಾಜರಿದ್ದು ಬಲ ತುಂಬಿದ್ರು.. ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಉಪಸ್ಥಿತರಿದ್ದರು. 14 ಸದಸ್ಯ ಬಲ ಹೊಂದಿರೋ ಕಾಂಗ್ರೆಸ್ ನಿಂದ ಕೇಶವ ಮರೋಳಿ ಮೇಯರ್ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಇನ್ನು ಎರಡು ಸದಸ್ಯ ಬಲ ಹೊಂದಿರೋ ಎಸ್ಡಿಪಿಐ ಅಭ್ಯರ್ಥಿಗಳು ತಟಸ್ಥರಾದರು.
ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ವಿ. ಯಶವಂತ್ ಚುನಾವಣೆ ಪ್ರಕ್ರಿಯೆಯನ್ನ ನಡೆಸಿದ್ರು. ಕೈ ಎತ್ತುವ ಮೂಲಕ ಸದಸ್ಯರು ತಮ್ಮ ಅಭ್ಯರ್ಥಿಗಳ ಪರ ಮತಚಲಾಯಿಸಿದ್ರು. ಮೇಯರ್-ಉಪಮೇಯರ್ ಚುನಾವಣೆ ಹಿನ್ನೆಲೆ ಪಾಲಿಕೆ ಕಚೇರಿಗೆ ಮಧ್ಯಾಹ್ನದವರೆಗೂ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿತ್ತು