Connect with us

  LATEST NEWS

  ಮಂಗಳೂರು : ನೂತನ ಸ್ವರ್ಣ ಲಾಲ್ಕಿ ವೆಂಕಟರಮಣ ದೇವರಿಗೆ ಸಮರ್ಪಣೆ

  ಮಂಗಳೂರು : ಮಂಗಳೂರು ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ದೇವರ ಮಹೋತ್ಸವ ಕಾರ್ಯಕ್ರಮಕ್ಕೆ ನೂತನವಾಗಿ ನಿರ್ಮಿಸಲಾದ ಸ್ವರ್ಣ ಲಾಲ್ಕಿ ಯ ಸಮರ್ಪಣಾ ಕಾರ್ಯಕ್ರಮ ಬುಧವಾರ ಶ್ರೀ ದೇವಳದಲ್ಲಿ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಶ್ರೀ ದೇವರಿಗೆ ಸಮರ್ಪಿಸಲಾಯಿತು .

  ಚಿತ್ರ : ಮಂಜು ನೀರೇಶ್ವಾಲ್ಯ

   

  ಈ ಸ್ವರ್ಣ ಪಲ್ಲಕಿಯನ್ನು ಬ್ರಹ್ಮರಥೋತ್ಸವದ ಹಿಂದಿನ ದಿನ ನಡೆಯುವ ಶ್ರೀ ದೇವರ ಮೃಗಬೇಟೆ ಉತ್ಸವ ನಡೆಯಲಿರುವುದು . ಇಂದು ಬೆಳಿಗ್ಗೆ ವೈದಿಕ ವಿಧಿವಿದಾನದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡು ಬಳಿಕ ಶ್ರೀಗಳವರ ದಿವ್ಯ ಆಗಮನ ಹಾಗೂ ಶ್ರೀ ವೀರ ವಿಠ್ಠಲ ದೇವರಿಗೆ ನೂತನ ಸ್ವರ್ಣ ಮಾಲೆ ಸಮರ್ಪಿಸಲಾಯಿತು . ಈ ಸ್ವರ್ಣ ಲಾಲ್ಕಿ ಯನ್ನು ಸೇವಾರೂಪದಲ್ಲಿ ಕೊಡುಗೈ ದಾನಿ ಡಾ . ಪಿ . ದಯಾನಂದ ಪೈ ಕುಟುಂಬಸ್ಥರು, ಪಿ . ಸತೀಶ್ ಪೈ ಕುಟುಂಬಸ್ಥರು ಹಾಗೂ ಜಿ ಯಸ್ ಬಿ ಸಮಾಜ ಬಾಂದವರು ಸೇವಾರೂಪದಲ್ಲಿ ನೀಡಲಾದ ಸ್ವರ್ಣ ಮತ್ತು ರಜತದಿಂದ ನಿರ್ಮಿಸಲಾಗಿದೆ . ಶ್ರೀ ದೇವರ ಹಗಲು ಪೇಟೆ ಉತ್ಸವ ನಡೆದು ಬಳಿಕ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಸಭಾಕಾರ್ಯಕ್ರಮ ನಡೆಯಿತು.

   

  ಈ ಸಂದರ್ಭದಲ್ಲಿ ಸೇವಾರೂಪದಲ್ಲಿ ಸ್ವರ್ಣ ದೇಣಿಗೆ ನೀಡಿದ ಭಜಕರಿಗೆ ಶ್ರೀ ಗಳವರಿಂದ ಸನ್ಮಾನಿಸಲಾಯಿತು ತದನಂತರ ಆಶೀರ್ವಚನ ನೆರವೇರಿತು . ಈ ಸಂದರ್ಭದಲ್ಲಿ ಡಾ . ಪಿ . ದಯಾನಂದ ಪೈ ದಂಪತಿ , ಪಿ . ಸತೀಶ್ ಪೈ ದಂಪತಿ ಗಳು , ದೇವಳದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ , ಸಾಹುಕಾರ್ ಕಿರಣ್ ಪೈ , ಸತೀಶ್ ಪ್ರಭು , ಕೆ . ಗಣೇಶ್ ಕಾಮತ್ , ಎಂ . ಜಗನ್ನಾಥ್ ಕಾಮತ್ , ತಂತ್ರಿಗಳಾದ ಪಂಡಿತ್ ನರಸಿಂಹ ಆಚಾರ್ಯ , ಪಂಡಿತ್ ಕಾಶೀನಾಥ್ ಆಚಾರ್ಯ , ಪ್ರಧಾನ ಅರ್ಚಕರಾದ ವೇದಮೂರ್ತಿ ಹರೀಶ್ ಭಟ್, ವೇದಮೂರ್ತಿ ಚಂದ್ರಕಾಂತ್ ಭಟ್ ಹಾಗೂ ಸಮಾಜದ ಸಹಸ್ರಾರು ಅಬಾಲವೃದ್ದ ಸ್ತ್ರೀ ಪುರುಷರು ಪಾಲ್ಗೊಂಡರು .

  Share Information
  Advertisement
  Click to comment

  You must be logged in to post a comment Login

  Leave a Reply