Connect with us

    DAKSHINA KANNADA

    ನಟೋರಿಯಸ್ ರೌಡಿ ಕಾಲಿಯಾ ರಫೀಕ್‌ ಹತ್ಯೆ ಪ್ರಕರಣದ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿದ ಮಂಗಳೂರು ಕೋರ್ಟ್..!

    ಮಂಗಳೂರು : 2017 ರಲ್ಲಿ ನಡೆದಿದ್ದ ನಟೋರಿಯಸ್ ರೌಡಿ ಕಾಲಿಯ ರಫೀಕ್ ಕೊಲೆ ಪ್ರಕರಣದ 4  ಆರೋಪಿಗಳನ್ನು ಖುಲಾಸೆಗೊಳಿಸಿ ಮಂಗಳೂರಿನ 1 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.

    ವಾದ ವಿವಾದಗಳನ್ನು ಆಲಿಸಿದ ದಕ್ಷಿಣ ಕನ್ನಡ ಗೌರವಾನ್ವಿತ 1ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಧೀಶರಾದ ಮಲ್ಲಿಕಾರ್ಜುನ ಸ್ವಾಮಿಯವರು  ಆರೋಪಿಗಳ ವಿರುದ್ಧ ಆರೋಪಗಳನ್ನು ಸಾಬೀತು ಪಡಿಸುವರೇ ವಿಫಲವಾಗಿದೆ ಎಂದು ಅಭಿಪ್ರಾಯ ಪಟ್ಟು ಆರೋಪಿಗಳನ್ನು ಬಿಡುಗಡೆ ಮಾಡಿ ತೀರ್ಪು ನೀಡಿದ್ದಾರೆ. ಆರೋಪಿಗಳ ಪರವಾಗಿ ಹಿರಿಯ ನ್ಯಾಯವಾದಿಯಾದ ಶ್ರೀಯುತ ವೈ. ವಿಕ್ರಮ್ ಹೆಗ್ಡೆ ಮತ್ತು ರಾಜೇಶ್ ಕೆ.ಜಿ. ಹಾಗೂ ಅಬ್ದುಲ್ ಅಜೀಜ್ ಬಾಯ‌ ವಾದಿಸಿದ್ದರು.

    2017 ರ ಫೆಬ್ರವರಿ 14 ರಾತ್ರಿ ಮಂಗಳೂರು ಹೊರವಲಯದ ಉಳ್ಳಾಲದ ಕೋಟೆಕಾರ್ ಬಳಿಯ ಪೆಟ್ರೋಲ್ ಪಂಪ್‌ ಬಳಿ  ಕಾಲಿಯಾ ರಫೀಕ್‌ ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಟಿಪ್ಪರ್ ಲಾರಿಯನ್ನು ಕಾಲಿಯಾ ರಫೀಕ್‌ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಸಲಾಗಿತ್ತು. ಅಲ್ಲಿಂದ  ತಪ್ಪಿಸಿಕೊಂಡು ಓಡಾಲು ಯತ್ನಿಸಿದ್ದ ರಫೀಕ್‌ನನ್ನು ಗುಂಡು ಹಾರಿಸಿ ತಲವಾರುಗಳಿಂದ  ದಾಳಿ ಮಾಡಿ ಕೊಲೆ ಮಾಡಲಾಗಿತ್ತು. ಕಾಸರಗೋಡು ಜಿಲ್ಲೆಯ ಉಪ್ಪಳದ ಹಿದಾಯತ್ ನಗರದ 9 ಜನ ಈ ಕೃತ್ಯ ನಡೆಸಿದ್ದಾಗಿ ನ್ಯಾಯಾಲಯಕ್ಕೆ ಅಂದಿನ ತನಿಖೆದಾರರಾದ ಉಳ್ಳಾಲ ಪೋಲಿಸ್ ನಿರೀಕ್ಷಕರಾದ ಕೆ.ಆರ್. ಗೋಪಿಕೃಷ್ಣ ಅವರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.  ಈ ಪ್ರಕರಣದಲ್ಲಿ ಆರೋಪಿಗಳಾದ ನಂ.1 ನೂರಲಿ, ನಂ.2 ಜಿಯ @ ಇಸುಬು ಶಿಯಾದ್, ನಂ.5 ರಶೀದ್, ನಂ. 6 ಮಜಿಬ್ @ ಕಲ್ಲಟ ನಜೀಬ್ ಕೆ.ಎ. ಇವರನ್ನು ಮಾನ್ಯ ನಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. 31 ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿತ್ತು.  ವಾದ ವಿವಾದಗಳನ್ನು ಆಲಿಸಿದ ದಕ್ಷಿಣ ಕನ್ನಡ ಗೌರವಾನ್ವಿತ 1ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಧೀಶರಾದ ಮಲ್ಲಿಕಾರ್ಜುನ ಸ್ವಾಮಿಯವರು  ಆರೋಪಿಗಳ ವಿರುದ್ಧ ಆರೋಪಗಳನ್ನು ಸಾಬೀತು ಪಡಿಸುವರೇ ವಿಫಲವಾಗಿದೆ ಎಂದು ಅಭಿಪ್ರಾಯ ಪಟ್ಟು ಆರೋಪಿಗಳನ್ನು ಬಿಡುಗಡೆ ಮಾಡಿ ತೀರ್ಪು ನೀಡಿದ್ದಾರೆ.

     

    Share Information
    Advertisement
    Click to comment

    Leave a Reply

    Your email address will not be published. Required fields are marked *