LATEST NEWS
ಕೊರೊನಾಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೊದಲ ಬಲಿ

ಕೊರೊನಾಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೊದಲ ಬಲಿ
ಮಂಗಳೂರು ಎಪ್ರಿಲ್ 19: ಕೊರೋನ ಮಾಹಾಮಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಲಿ ಪಡೆದಿದೆ. ಉಸಿರಾಟದ ತೊಂದರೆಯಿಂದ ನಿನ್ನೆ ಖಾಸಗಿ ಆಸ್ಪತ್ರಗೆ ದಾಖಲಾಗಿದ್ದ ಬಂಟ್ವಾಳ ಮೂಲದ ಮಹಿಳೆಯನ್ನು ಇಂದು ಶಂಕಿತ ಕೊರೊನಾ ಲಕ್ಷಣ ಹಿನ್ನಲೆ ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಇಂದು ಉಸಿರಾಟದ ತೊಂದರೆ ವಿಷಮ ಸ್ಥಿತಿಗೆ ತಲುಪಿದ ಹಿನ್ನಲೆ ಬೆಳಿಗ್ಗೆ ಕೊನೆಯುಸಿರೆಳಿದಿದ್ದಾರೆ.
ನಿನ್ನೆ ಮಹಿಳೆಯ ಥ್ರೋಟ್ ಸ್ಕ್ವಾಬ್ ನ್ನು ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ಸ್ಯಾಂಪಲ್ ಟೆಸ್ಟ್ ವರದಿ ಬಂದಿದ್ದು, ವರದಿಯಲ್ಲಿ ಕೊರೊನ ಪಾಸಿಟಿವ್ ಎಂದು ತಿಳಿದು ಬಂದಿದೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾಗೆ 15 ಮಂದಿ ಮೃತಪಟ್ಟಿದ್ದರೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ.

ಸದ್ಯ ಮೃತರ ಪತಿ, ಮಗ, ಅತ್ತೆಗೆ ಕ್ವಾರಂಟೈನ್ ಮಾಡಲಾಗಿದ್ದು, ಮೂವರ ಥ್ರೋಟ್ ಸ್ವ್ಕಾಬ್ ಸಂಗ್ರಹಿಸಿ ಪರೀಕ್ಷೆ ಕಳುಹಿಸಲಾಗಿದೆ. ಮೃತ ಮಹಿಳೆ ಮಗ ಮಾರ್ಚ್ 16 ರಂದು ದುಬೈ ನಿಂದ ಬಂದಿದ್ದರು.
ಕೊರೊನಾ ಬಂಟ್ವಾಳ ಮೂಲದ ಮಹಿಳೆ ಬಲಿ ಪ್ರಕರಣ ನಂತರ ಬಂಟ್ವಾಳ ಕೆಳಗಿನ ಪೇಟೆಯನ್ನು ಜಿಲ್ಲಾಡಳಿತ ಸೀಲ್ ಡೌನ್ ಮಾಡಿದೆ. ಬಂಟ್ವಾಳ ನಗರ ಪೊಲೀಸರಿಂದ ಪೇಟೆಯಲ್ಲಿ ಸೀಲ್ ಡೌನ್ ಆಗಿದೆ, ಯಾರು ಮನೆಯಿಂದ ಹೊರಬರಬೇಡಿ ಎಂದು ಅನೌನ್ಸ್