LATEST NEWS
ಮಾರ್ಚ್ 3 ರಿಂದ ಬಿಜೆಪಿಯ ಜನರಕ್ಷಾ ಮಂಗಳೂರು ಚಲೋ ಯಾತ್ರೆ
ಮಾರ್ಚ್ 3 ರಿಂದ ಬಿಜೆಪಿಯ ಜನರಕ್ಷಾ ಮಂಗಳೂರು ಚಲೋ ಯಾತ್ರೆ
ಕೇರಳದಲ್ಲಿ ಆರ್ ಎಸ್ಎಸ್ ಕಾರ್ಯಕರ್ತರ ಹತ್ಯೆಗಳನ್ನು ಖಂಡಿಸಿ ನಡೆದ ಬೃಹತ್ ಜನರಕ್ಷಾ ಯಾತ್ರೆ ಮಾದರಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಕೂಡ ಜನರಕ್ಷಾ ಮಂಗಳೂರು ಚಲೋ ಯಾತ್ರೆ ಆಯೋಜಿಸಿದೆ.
ಇದೇ ಬರುವ ಮಾರ್ಚ್ 3 ರಿಂದ 6 ರವೆರೆಗ ಕರಾವಳಿಯಲ್ಲಿ ಈ ಯಾತ್ರೆ ನಡೆಯಲಿದೆ.
ಕೊಡಗಿನ ಕುಶಾಲನಗರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ದಿಂದ ಎರಡು ಭಾಗದಿಂದ ಯಾತ್ರೆಗಳಿಗೆ ಮಾರ್ಚ 3 ರಂದು ಮುಂಜಾನೆ ಚಾಲನೆ ದೊರಕಲಿದೆ. ಕುಶಾಲನಗರದಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಯಾತ್ರೆಗೆ ಚಾಲನೆ ನೀಡಿದರೆ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ದಲ್ಲಿ ಸದಾನಂದ ಗೌಡ ಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದ್ದಾರೆ.
ಮಾರ್ಚ್ 3 ರಂದು ಕುಶಾಲನಗರ ಹಾಗು ಅಂಕೋಲಾ ದಿಂದ ಹೊರಡುವ ಜನಸುರಕ್ಷಾ ಯಾತ್ರೆ ಮಂಗಳೂರಲ್ಲಿ ಮಾರ್ಚ್ 6 ರಂದು ಸಮಾಪನಗೊಳ್ಳಲಿದೆ. ಕುಶಾಲನಗರದಿಂದ ಹೊರಡುವ ಯಾತ್ರೆಯ ನೇತೃತ್ವವನ್ನು ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗು ಪ್ರತಾಪ್ ಸಿಂಹ ವಹಿಸಲಿದ್ದಾರೆ. ಅದೇರೀತಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ದಿಂದ ಹೊರಡುವ ಯಾತ್ರೆ ನೇತೃತ್ವವನ್ನು ಸಂಸದರಾದ ಅನಂತ ಕುಮಾರ್ ಹೆಗ್ಡೆ ಹಾಗು ಶೋಭಾ ಕರಂದ್ಲಾಜೆ ವಹಿಸಲಿದ್ದಾರೆ.
ಮಾರ್ಚ್ 6 ರಂದು ಮಂಗಳೂರಿನ ಕದ್ರಿ ಮಂಜುನಾಥೇಶ್ವರ ಕ್ಷೇತ್ರದಿಂದ ಹಾಗೂ ಪಂಪ್ ವೆಲ್ ನಿಂದ ಪಾದಯಾತ್ರೆ ನಡೆಯಲಿದ್ದು ನಗರದ ಕೇಂದ್ರ ಮೈದಾನದವರೆಗೆ ಪಾದಯಾತ್ರೆ ಸಂಪನ್ನ ಗೊಳ್ಳಲಿದೆ. ಕೇಂದ್ರ ಮೈದಾನದಲ್ಲಿ ನಡೆಯಲಿರುವ ಜನಸುರಕ್ಷಾ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮಾರೋಪ ಭಾಷಣ ಮಾಡಲಿದ್ದಾರೆ. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭಾಗವಹಿಸಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದ್ದಾರೆ.