Connect with us

    LATEST NEWS

    ರನ್ ವೇ ನಲ್ಲಿ ಟ್ರಾಕ್ಟರ್ ಸುದ್ದಿಗೆ ಸ್ಪಷ್ಟನೆ ನೀಡಿದ ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿ

    ರನ್ ವೇ ನಲ್ಲಿ ಟ್ರಾಕ್ಟರ್ ಸುದ್ದಿಗೆ ಸ್ಪಷ್ಟನೆ ನೀಡಿದ ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿ

    ಮಂಗಳೂರು ಜನವರಿ 11: ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಟೇಕ್ ಆಫ್ ಆಗುವ ವೇಳೆ ಯಾವುದೇ ರನ್ ವೇ ಮೇಲೆ ಯಾವುದೇ ಲಗೇಜ್ ಟ್ರಾಕ್ಟರ್ ಇರಲಿಲ್ಲ ಎಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

    ಮಂಗಳೂರು – ಮುಂಬಯಿ ಜೆಟ್ ಏರ್ ವೇಸ್ ವಿಮಾನ ಟೇಕ್ ಆಫ್ ಗೆ ರನ್ ವೇ ಗೆ ಹೊರಡುವ ಸಂದರ್ಭದಲ್ಲಿ ಏರ್ ಟ್ರಾಫಿಕ್ ಕಂಟ್ರೋಲರ್ ಅಧಿಕಾರಿಗಳಿಗೆ ನಿಲ್ದಾಣದ ವ್ಯಾಪ್ತಿಯಲ್ಲಿ ಟ್ರ್ಟಾಕ್ಟರ್ ಗೊಚರಿಸಿದೆ. ಈ ಹಿನ್ನಲೆಯಲ್ಲಿ ಜೆಟ್ ಏರ್ ವೇಸ್ ವಿಮಾನದ ಟೇಕ್ ಆಫ್ ಮಾಡಲು ಅನುಮತಿಯನ್ನು ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಟ್ಯಾಕ್ಟರ್ ದೂರ ಸಾಗಿದ ಬಳಿಕ  ವಿಮಾನವನ್ನು ಟೇಕ್ ಆಫ್ ರನ್ ವೇ ಪ್ರವೇಶಿಸಲು ಎ ಟಿ ಸಿ ಆದೇಶ ನೀಡಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಮಾದ್ಯಮಗಳಲ್ಲಿ ರನ್ ವೇ ಯಲ್ಲಿ ಟ್ಯಾಕ್ಟರ್ ಇದ್ದ ಬಗ್ಗೆ ತಪ್ಪು ಸುದ್ದಿಪ್ರಸಾರ ವಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *