LATEST NEWS
ಗಂಭೀರವಾಗಿ ಗಾಯಗೊಂಡ ಕಾರ್ಮಿಕನ ರಕ್ಷಣೆಗೆ ಬಾರದ ವಿಮಾನ ನಿಲ್ದಾಣದ ಅಂಬ್ಯುಲೆನ್ಸ್

ಗಂಭೀರವಾಗಿ ಗಾಯಗೊಂಡ ಕಾರ್ಮಿಕನ ರಕ್ಷಣೆಗೆ ಬಾರದ ವಿಮಾನ ನಿಲ್ದಾಣದ ಅಂಬ್ಯುಲೆನ್ಸ್
ಮಂಗಳೂರು ಅಕ್ಟೋಬರ್ 16: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎಕ್ಸ್ಲೇಟರಿ ಬಳಿ ಮಾರ್ಬಲ್ ಅನ್ಲೋಡಿಂಗ್ ಮಾಡುತ್ತಿದ್ದ ವೇಳೆ ಕಾರ್ಮಿಕನ ಮೇಲೆ ಮಾರ್ಬಲ್ ಬಿದ್ದು ಕಾರ್ಮಿಕನ ಕಾಲಿಗೆ ಗಂಭೀರವಾದ ಘಟನೆ ನಡೆದಿದೆ.
ತೀವ್ರ ರಕ್ತ ಸ್ರಾವದಿಂದ ಒದ್ದಾಡುತ್ತಿದ್ದ ಕಾರ್ಮಿಕನನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸಬೇಕಿದ್ದರು ವಿಮಾನನಿಲ್ದಾಣದ ಅಂಬುಲೆನ್ಸ್ ಕಾರ್ಮಿಕನ ಸಹಾಯಕ್ಕೆ ಬರಲಿಲ್ಲ.

ಈ ಸಂದರ್ಭದಲ್ಲಿ ಮಂಗಳೂರಿನಿಂದ ವಿಮಾನ ಪ್ರಯಾಣಿಕರೊಬ್ಬರನ್ನು ಡ್ರಾಪ್ ಗೆ ಹೋಗಿದ್ದ ಕ್ಯಾಬ್ ಚಾಲಕ ಕೂಡಲೇ ಕಾರ್ಮಿಕನನ್ನು ತನ್ನ ಕಾರಲ್ಲಿ ಹಾಕಿ ಮಂಗಳೂರಿನ ಏ.ಜೆ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂಬ್ಯುಲೆನ್ಸ್ ಇದ್ದರೂ ಯಾವುದೇ ಸಹಾಯಕ್ಕೆ ಬಾರದೆ ಇರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾನವೀಯತೆ ಮೆರೆದ ಆನ್ ಲೈನ್ ಕ್ಯಾಬ್ ಚಾಲಕ ಮಹೇಶರಿಗೆ ದ.ಕ ಜಿಲ್ವಾ ಆನ್ ಲೈನ್ ಡ್ರೈವರ್ಸ್ &ಓನರ್ಸ್ ಎಸೋಸಿಯೇಶನ್ ಅಭಿನಂದನೆ ಸಲ್ಲಿಸಿದೆ.