LATEST NEWS
ವಿವಾದಕ್ಕೆ ಕಾರಣವಾದ ಕೊಲ್ಲೂರು ದೇವಸ್ಥಾನದ ಲಕ್ಷ್ಮೀ ಮಂಟಪಕ್ಕೆ ಮಹಿಳೆ ಎಂಟ್ರಿ
ವಿವಾದಕ್ಕೆ ಕಾರಣವಾದ ಕೊಲ್ಲೂರು ದೇವಸ್ಥಾನದ ಲಕ್ಷ್ಮೀ ಮಂಟಪಕ್ಕೆ ಮಹಿಳೆ ಎಂಟ್ರಿ
ಉಡುಪಿ ಅಕ್ಟೋಬರ್ 17: ಕೊಲ್ಲೂರು ದೇವಸ್ಥಾನದ ಲಕ್ಷ್ಮೀಮಂಟಪಕ್ಕೆ ದೇವಸ್ಥಾನದ ಮಾಜಿ ಆಡಳಿತಾಧಿಕಾರಿ ಅಕ್ರಮ ಪ್ರವೇಶ ಮಾಡಿರುವ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಈಗ ವೈರಲ್ ಆಗಿದ್ದು, ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಲ್ಲೂರು ದೇವಸ್ಥಾನದ ಮಾಜಿ ಆಡಳಿತಾಧಿಕಾರಿಯಾಗಿರುವ ಉಮಾ ಅವರು ದೇವಸ್ಥಾವದ ಲಕ್ಷ್ಮೀಮಂಟಪಕ್ಕೆ ಅಕ್ರಮ ಪ್ರವೇಶ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತಂತೆ ಸಿಸಿಟಿವಿ ವಿಡಿಯೋ ಈಗ ವೈರಲ್ ಆಗಿದ್ದು. ಮಾಜಿ ಆಡಳಿತಾಧಿಕಾರಿಯಿಂದ ದೇವಸ್ಥಾನದ ಸಂಪ್ರದಾಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ.
ಉಮಾ ಆಡಳಿತಾಧಿಕಾರಿಯಾಗಿದ್ದಾಗ ಅವರ ಅವಧಿಯಲ್ಲಿ ದೇವಸ್ಥಾನದಲ್ಲಿ ಬಹಳ ಅಕ್ರಮ ನಡೆದಿತ್ತು. ಹರಕೆ ನೀಡಿದ ಚಿನ್ನವನ್ನು ಅಡ ಇಟ್ಟು ದೇವಳದ ಸಿಬ್ಬಂದಿ ಗೋಲ್ ಮಾಲ್ ಮಾಡಿದ್ದರು. ಇದೀಗ ಉಮಾ ಅವರಿಗೆ ಲಕ್ಷ್ಮೀ ಮಂಟಪ ಪ್ರವೇಶ ಅವಕಾಶ ಕೊಟ್ಟಿದ್ದು ವಿವಾದಕ್ಕೆ ಕಾರಣವಾಗಿದೆ. ಆಡಳಿತಾಧಿಕಾರಿಯಾಗಿದ್ದಾಗ ಉಮಾ ಲಕ್ಷ್ಮೀ ಮಂಟಪ ಪ್ರವೇಶಿಸುತ್ತಿದ್ದರು. ಆಗ ಹುದ್ದೆಯ ಗೌರವಕ್ಕಾಗಿ ಈ ಅವಕಾಶ ಕೊಡಲಾಗಿತ್ತು. ಈಗ ಪ್ರವೇಶ ಮಾಡುವುದು ಸರಿಯಲ್ಲ ಎಂಬ ಮಾತು ಕೇಳಿ ಬಂದಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.