DAKSHINA KANNADA
ಮಂಗಳೂರು : ‘ಅಡ್ಡೂರು ಪ್ರದೇಶ ಮಿನಿ ಪಾಕಿಸ್ತಾನ ಆಗಿದ್ದು ಕ್ರಮಕ್ಕೆ ಅಧಿಕಾರಿಗಳೇ ಹೆದರುತ್ತಿದ್ದಾರೆ’ ; ಶಾಸಕ ಡಾ ಭರತ್ ಶೆಟ್ಟಿ
ಮಂಗಳೂರು : ಕೈಕಂಬ ಪೊಳಲಿ ಸಂಪರ್ಕದ ಅಡ್ಡೂರು ಪ್ರದೇಶ ಮಿನಿ ಪಾಕಿಸ್ತಾನವಾಗಿದ್ದು ಇಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳೆ ಹೆದರುತ್ತಿದ್ದಾರೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಡಾ. ಭರತ್ ಶೆಟ್ಟಿ ಈ ಪ್ರದೇಶ ಅಕ್ರಮ ಮರಳುಗಾರಿಕೆಗೆ ಕುಖ್ಯಾತಿ ಪಡೆದಿದ್ದು ಕಳೆದ ಹಲವಾರು ವರ್ಷಗಳಿಂದ ಸೇತುವೆ ಕೆಳ ಭಾಗದಲ್ಲಿ ಅಕ್ರಮ ಮರಳುಗಾರಿಕೆ ಆಗ್ತಾ ಇದೆ. ಆದ್ದರಿಂದ ಇದೀಗ ಹಾನಿಯಾಗಿದ್ದರಿಂದ ಅಡ್ಡೂರು ಸೇತುವೆಯಲ್ಲಿ ಘನ ವಾಹನ ಸಂಚಾರಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ. ಸೇತುವೆ ದುರಸ್ತಿ ಕಾಮಗಾರಿ ಮುಗಿಯುವವರೆಗೆ ಈ ಭಾಗದಲ್ಲಿ ಘನ ವಾಹನ ಸಂಚಾರ ನಿಷೇಧಕ್ಕೆ ಜಿಲ್ಲಾಡಳಿತ ಆದೇಶ ಮಾಡಿದೆ. ಇಲ್ಲಿ ಕಳೆದ ಅನೇಕ ವರ್ಷಗಳಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಒಂದುವರೆ ವರ್ಷಗಳಿಂದ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಹೇಳ್ತಾ ಇದ್ದು ಅನೇಕ ಬಾರಿ ಮರಳು ಅಕ್ರಮ ಅಡ್ಡೆಗಳ ಮೇಲೆ ದಾಳಿ ಮಾಡಿ ನಿಲ್ಲಿಸಲಾಗಿತ್ತು. ಆದರೆ ಇದೀಗ ಮತ್ತೆ ಆರಂಭಗೊಂಡಿದೆ ಅಂದ್ರೆ ಈ ಪ್ರದೇಶ ಒಂದು ಮಿನಿ ಪಾಕಿಸ್ತಾನ ಆಗಿದೆ. ಈ ಭಾಗದಲ್ಲಿ ಅಧಿಕಾರಿಗಳು ಹೋಗಲು ಹೆದರುವಂತಾಗಿದೆ. ಅಧಿಕಾರಿಗಳು ದಾಳಿ ಮಾಡಿದ್ರು ರಾತ್ರಿ ವೇಳೆ ಮರಳುಗಾರಿಕೆ ಮಾಡ್ತಾ ಇರ್ತಾರೆ. ಅಧಿಕಾರಿಗಳು ಹೋದಾಗ ಮರಳುಗಾರಿಕೆ ನಿಲ್ಲಿಸ್ತಾರೆ ಬಳಿಕ ಆರಂಭಿಸುತ್ತಾರೆ ಅಂದ ಅವರು ಜಿಲ್ಲಾ ಮಂತ್ರಿಗಳಿಗೆ ಈ ಭಾಗದಲ್ಲಿ ಅಕ್ರಮ ಮರಳುಗಾರಿಕೆ ನಿಲ್ಲುಸಲು ಆಗುತ್ತ ಇಲ್ವಾ ಎಂದು ಸವಾಲು ಹಾಕಿದರು. ಜಿಲ್ಲೆಯ ಎಲ್ಲಾ ಭಾಗದಲ್ಲಿ ಅಕ್ರಮ ಮರಳುಗಾರಿಕೆ ತಡೆಯುತ್ತಾರೆ ಆದ್ರೆ ಅಡ್ಡೂರಿನಲ್ಲಿ ಆಗಲ್ವ..? ಈ ಭಾಗದಲ್ಲಿ ಲೈಸೆನ್ಸ್ ಇರುವವರು ಯಾರು ಇಲ್ಲ. ಮತ್ತು ಮಳೆಗಾಲದಲ್ಲಿ ಯಾರು ಮರಳುಗಾರಿಕೆ ಮಾಡುವಂತಿಲ್ಲ ಆದ್ರೂ ಈ ಭಾಗದಲ್ಲಿ ನಿತ್ಯ ಮರಳುಗಾರಿಕೆ ಆಗ್ತಾ ಇದೆ. ಅದ್ರಲ್ಲೂ ಸೇತುವೆ ಕೆಳಭಾಗದಲ್ಲಿ ಅಕ್ರಮ ಮರಳುಗಾರಿಕೆ ಮಾಡ್ತಾರೆ. ಇದ್ರಲ್ಲಿ ರಾಜಕೀಯ ಕೈವಾಡ ಇದೆಯಾ…? ಅಥವಾ ಒಂದು ಸಮುದಾಯ ಎಂದು ಭಯವೇ..? ಎಂದು ಪ್ರಶ್ನಿಸಿದ ಅವರು ಇದೀಗಾ ಸೇತುವೆ ಸಂಚಾರ ನಿಷೇಧದಿಂದ ದೇವಾಲಯಕ್ಕೆ ಹೋಗೋರಿಗೂ ಕಷ್ಟವಾಗಿದೆ. ಸಾರ್ವಜನಿಕರಿಗೆ ಸಂಚಾರ ನಿಷೇಧ ಇದೆ ಆದ್ರೆ ಅಕ್ರಮ ಮರಳುಗಾರರ ವಾಹನ ಹೋಗಲು ಅವಕಾಶ ಇದೆ. ಇದು ಅಕ್ರಮ ಮರಳುಗಾರಿಕೆ ಮಾಡುವವರಿಗಾಗಿ ಸೇತುವೆ ಮುಚ್ಚಿಸಲಾಗಿದಾ..? ಈ ಬಗ್ಗೆ ಜಿಲ್ಲೆಯ ಇತರ ರಾಜಕೀಯದಲ್ಲಿ ಹಿರಿಯರು ಇದ್ದಾರೆ. ಅವರು ಈ ಬಗ್ಗೆ ಮಾತನಾಡಲು ಯಾಕೆ ಬರಲ್ಲ. ಮಿನಿಸ್ಟರ್ ಬರ್ತಾರೆ ಯಾರೋ ಪುಡಾರಿಗಳ ಜೊತೆ ತಿರುಗಾಟ ಮಾಡ್ತಾರೆ, ಮತ್ತು ಜಿಲ್ಲೆಯಲ್ಲಿ ಮೀಟಿಂಗ್ ಮಾಡ್ತಾರೆ. ಬಳಿಕ ಅವರಿಗೆ ಬೇಕಾದವರೊಂದಿಗೆ ಮೀಟಿಂಗ್ ಮಾಡಿ ಪ್ರೊಸೀಡಿಂಗ್ಸ್ ಮಾಡ್ತಾರೆ. ಎಂದು ಜಿಲ್ಲಾ ಉಸ್ತುವಾರಿ ಸಚಿವರ ಮೇಲೂ ಡಾ. ಭರತ್ ಶೆಟ್ಟಿ ಹರಿಹಾಯ್ದರು.