Connect with us

LATEST NEWS

ನವೆಂಬರ್ 1 ರಿಂದ ಮೊದಲಿನ ವೇಳಾಪಟ್ಟಿಯಲ್ಲೇ ವಿಜಯಪುರ–ಮಂಗಳೂರು ಜಂಕ್ಷನ್‌ ರೈಲು ಪ್ರಾರಂಭ

ಮಂಗಳೂರು: ನವೆಂಬರ್ 1 ರಿಂದ ವಿಜಯಪುರ–ಮಂಗಳೂರು ಜಂಕ್ಷನ್‌ ದೈನಂದಿನ ರೈಲು ಸಂಚಾರ ಪುನರಾರಂಭವಾಗಲಿದೆ. ವೇಳಾಪಟ್ಟಿ ಬದಲಾವಣೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಮನವಿಯನ್ನು ರೈಲ್ವೆ ಇಲಾಖೆ ತಿರಸ್ಕರಿಸಿದ್ದು, ಮೊದಲಿನ ವೇಳಾಪಟ್ಟಿಯಲ್ಲಿ ಈ ರೈಲು ಸಂಚರಿಸಲಿದೆ. ಈ ರೈಲು ಸಂಚಾರದ ಸಮಯದಲ್ಲಿ ಮಂಗಳೂರು ಜಂಕ್ಷನ್‌ ನಿಲ್ದಾಣದಲ್ಲಿ ಹೆಚ್ಚಿನ ರೈಲು ದಟ್ಟಣೆ ಇರುವುದರಿಂದ ಸಮಯ ಬದಲಾವಣೆ ಸಾಧ್ಯವಿಲ್ಲ ಎಂದು ನೈರುತ್ಯ ರೈಲ್ವೆ ಸ್ಪಷ್ಟಪಡಿಸಿದೆ.

ಈ ಮೊದಲು ರೈಲು ಬಳಕೆದಾರರ ಸಂಘ ಹಾಗೂ ಸಂಸದ ನಳಿನ್‌ಕುಮಾರ್ ಕಟೀಲ್‌ ಅವರು, ರೈಲ್ವೆ ಸಚಿವರನ್ನು ಭೇಟಿ ಮಾಡಿ, ವಿಜಯಪುರ–ಮಂಗಳೂರು ಜಂಕ್ಷನ್‌ ರೈಲು ಸಂಜೆ 4.30 ರ ಬದಲು ಸಂಜೆ 5.30ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡುವಂತೆ ಮನವಿ ಮಾಡಿದ್ದರು. ಜೊತೆಗೆ ಮಧ್ಯಾಹ್ನ 12.40 ರ ಬದಲು ಬೆಳಿಗ್ಗೆ 9 ಗಂಟೆಗೆ ಮಂಗಳೂರು ಜಂಕ್ಷನ್‌ ನಿಲ್ದಾಣ ತಲುಪುವಂತೆ ಒತ್ತಾಯಿಸಿದ್ದರು.

ಈ ರೈಲು ಮಧ್ಯಾಹ್ನ ಮಂಗಳೂರಿಗೆ ಬರುತ್ತಿದ್ದು, ಇದರಿಂದ ಕಚೇರಿಗೆ ಕೆಲಸಗಳಿಗೆ ಹೋಗುವ ಹಾಗೂ ಇನ್ನಿತರ ಕೆಲಸಗಳಿಗೆ ತೆರಳುವ ಜನರಿಗೆ ತೊಂದರೆ ಆಗುತ್ತಿದೆ. ಜೊತೆಗೆ ಸಂಜೆ 5.30ಕ್ಕೆ ಮಂಗಳೂರಿನಿಂದ ಹೊರಟರೆ, ಜನರು ಆ ದಿನದ ಕೆಲಸ ಕಾರ್ಯಗಳನ್ನು ಮುಗಿಸಲು ಅನುಕೂಲ ಆಗಲಿದೆ ಎಂದು ತಿಳಿಸಿದ್ದರು. ಆದರೆ ರೈಲ್ವೆ ಇಲಾಖೆ ಮನವಿಯನ್ನು ತಿರಸ್ಕರಿಸಿದ್ದು, ಮೊದಲಿನ ವೇಳಾಪಟ್ಟಿಯಲ್ಲೇ ರೈಲು ಸಂಚರಿಸಲಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *