DAKSHINA KANNADA
ಮಂಗಳೂರು: ಮಂಗಳಮುಖಿಯರಿಂದ ಯುವಕನ ಮೇಲೆ ಹಲ್ಲೆ

ಮಂಗಳೂರು, ಮೇ 20: ನಗರದ ಕುಂಟಿಕಾನ ರಾಷ್ಟ್ರೀಯ ಹೆದ್ದಾರಿಯ ಫ್ಲೈಒವರ್ ಕೆಳಗೆ ಅಮಾಯಕ ಯುವಕನೋರ್ವನ ಮೇಲೆ ಮಂಗಳಮುಖಿಯರು ಹಲ್ಲೆ ನಡೆಸಿದ ಘಟನೆ ಸಂಜೆ ವೇಳೆ ನಡೆದಿದೆ.
ಹಲವು ವರ್ಷಗಳಿಂದ ಇದೇ ಫ್ಲೈಒವರ್ ಕೆಳಗೆ ಸಂಜೆ ವೇಳೆ ಬೀಡು ಬಿಟ್ಟಿರುವ ಇಬ್ಬರು ಮಂಗಳಮುಖಿಯರು ಯುವಕನೋರ್ವನ ಮೇಲೆ ಹಲ್ಲೆ ನಡೆಸಿದ್ದಾರೆ.

ಘಟನೆ ನಡೆದ ತಕ್ಷಣ ಸ್ಥಳೀಯ ನಾಗರೀಕರು ಜಮಾಯಿಸಿದ್ದು, ಇನ್ನು ಮುಂದೆ ಇಲ್ಲಿ ಅನೈತಿಕ ಚಟುವಟಿಕೆಗೆ ಅವಕಾಶ ನೀಡಬಾರದೆಂದು ಒತ್ತಾಯಿಸಿದ್ದಾರೆ.
ಇದೇ ವೇಳೆ ಮತ್ತಿಬ್ಬರು ಮಂಗಳಮುಖಿಯರು ಸ್ಥಳಕ್ಕಾಗಮಿಸಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಮಾಹಿತಿ ಪಡೆದ ಉರ್ವಾ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಘಟನೆ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.