LATEST NEWS
ಪ್ರಯಾಣಿಕರ ಗಮನಕ್ಕೆ – ಮಂಗಳೂರು-ವಿಜಯಪುರ ಎಕ್ಸಪ್ರೇಸ್ ರೈಲು ಜೂನ್ ವರೆಗೆ ವಿಸ್ತರಣೆ
ಮಂಗಳೂರು ಡಿಸೆಂಬರ್ 27: ಮಂಗಳೂರು ಸೆಂಟ್ರಲ್ ನಿಂದ ವಿಜಯಪುರ ಕ್ಕೆ ತೆರಳುವ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು (ರೈಲು ಸಂಖ್ಯೆ 07377/07378) ಸೇವೆಯನ್ನು ವಿಸ್ತರಿಸಲಾಗಿದೆ.
ವಿಜಯಪುರ- ಮಂಗಳೂರು ಸೆಂಟ್ರಲ್ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು (07377) 2025ರ ಜನವರಿ 1ರಿಂದ ಜೂನ್ 30ರವರೆಗೆ ಸಂಚಾರ ಮುಂದುವರಿಸಲಿದೆ. ಈ ಮೊದಲು ರೈಲು ಇದೇ ತಿಂಗಳ 31ರವರೆಗೆ ಸಂಚರಿಸಲಿತ್ತು. ಮಂಗಳೂರು ಸೆಂಟ್ರಲ್-ವಿಜಯಪುರ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು (07378) 2025ರ ಜನವರಿ 2ರಿಂದ ಜುಲೈ 1 ರವರೆಗೆ ಸಂಚಾರ ಮುಂದುವರಿಸಲಿದೆ.