DAKSHINA KANNADA
ಲಾಕ್‌ಡೌನ್ ನಂತರ ಮೊದಲ ಬಾರಿಗೆ ‘ಹೌಸ್‌ಫುಲ್’ ಆದ ಮಂಗಳೂರಿನ ಥಿಯೇಟರ್, ಮಲ್ಟಿಪ್ಲೆಕ್ಸ್‌ಗಳು
ಮಂಗಳೂರು, ಜನವರಿ 14: ಕೊರೊನಾ ಮಹಾಮಾರಿಯ ಕಾರಣದಿಂದಾಗಿ ಸುದೀರ್ಘಕಾಲದವರೆಗೆ ಮುಚ್ಚಿದ್ದ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ಒಂದೆರಡು ತಿಂಗಳ ಹಿಂದೆ ತೆರೆದಿದ್ದರೂ, ಕೊರೊನಾ ಸೋಂಕಿನ ಭಯದಿಂದ ಹೆಚ್ಚಿನ ಜನರು ಚಲನಚಿತ್ರ ನೋಡಲು ಚಿತ್ರಮಂದಿರಗಳಿಗೆ ಹೋಗುತ್ತಿರಲಿಲ್ಲ. ಆದರೆ, ಜನವರಿ 13 ರ ಬುಧವಾರ ನಗರದ ಬಹುತೇಕ ಎಲ್ಲಾ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ವಿಜಯ್ ಅಭಿನಯದ ತಮಿಳು ಚಲನಚಿತ್ರ ‘ಮಾಸ್ಟರ್’ ಹೌಸ್‌ಫುಲ್ ಪ್ರದರ್ಶನ ಕಂಡಿದೆ.
ಬೆಳಿಗ್ಗೆ 6.30 ಕ್ಕೆ ಆರಂಭವಾದ ಮೊದಲ ಪ್ರದರ್ಶನ ಸೇರಿದಂತೆ ಸುಚಿತ್ರ ಚಿತ್ರಮಂದಿರದಲ್ಲಿ ದಿನದಲ್ಲಿ ಐದು ಪ್ರದರ್ಶನಗಳು ಕಂಡಿದೆ. ಎಲ್ಲಾ ಪ್ರದರ್ಶನಗಳು ಹೌಸ್ ಫುಲ್ ಆಗಿದೆ ಎಂದು ವರದಿಯಾಗಿದೆ. ಸಿನಿಪಾಲಿಸಿಯಲ್ಲಿ ನಾಲ್ಕು ಪ್ರದರ್ಶನಗಳು, ಬಿಗ್ ಸಿನೆಮಾಸ್‌ನಲ್ಲಿ ಮೂರು ಪ್ರದರ್ಶನಗಳು ಮತ್ತು ಪಿವಿಆರ್ ಮಲ್ಟಿಪ್ಲೆಕ್ಸ್‌ಗಳಲ್ಲಿ ನಾಲ್ಕು ಪ್ರದರ್ಶನಗಳು ಕಂಡಿದ್ದು ಎಲ್ಲವೂ ಕೂಡಾ ಹೌಸ್‌ಫುಲ್ ಆಗಿದ್ದವು.
ಚಿತ್ರಮಂದಿರಗಳನ್ನು ಪುನಃ ತೆರೆದ ನಂತರ ಹೌಸ್‌ಫುಲ್ ಆದ ಮೊದಲ ಚಿತ್ರ ಇದಾಗಿದ್ದು. ಕೊರೊನಾ ಕಾರಣದಿಂದಾಗಿ 2020 ಮಾರ್ಚ್‌ನಲ್ಲಿ ಲಾಕ್‌ಡೌನ್ ಹೇರಲಾಗಿದ್ದು ಕಳೆದ ಒಂದೆರಡು ತಿಂಗಳ ಹಿಂದಿನವರೆಗೆ ಚಿತ್ರಮಂದಿರಗಳು ಮುಚ್ಚಿದ್ದವು.