LATEST NEWS
ಮಂಗಳೂರು : ರೈಲ್ವೆ ಕೆಳಸೇತುವೆ ಮೇಲ್ಸೇತುವೆಯ ಕಾಮಗಾರಿಯಲ್ಲಿ ಆಮೆಗತಿ, ಡಿಸೆಂಬರ್ ನಲ್ಲಿ ಬೃಹತ್ ಹೋರಾಟಕ್ಕೆ ತೀರ್ಮಾನ .!
ಮಂಗಳೂರು : ಮಂಗಳೂರು ನಗರದ ಜೆಪ್ಪು ಮಹಾಕಾಳಿಪಡ್ಪು ರೈಲ್ವೆ ಅಂಡರ್ ಪಾಸ್ ಹಾಗೂ ಪಾಂಡೇಶ್ವರ ರೈಲ್ವೆ ಮೇಲ್ಸೇತುವೆ ಹೋರಾಟ ಸಮಿತಿಯ ಸಭೆಯು ಸಮಿತಿಯ ಗೌರವಾಧ್ಯಕ್ಷರಾದ ದಿಲ್ ರಾಜ್ ಆಳ್ವಾರವರ ಅಧ್ಯಕ್ಷತೆಯಲ್ಲಿ ರಿಜಾರಿಯೋ ಚರ್ಚ್ ಮಿನಿ ಹಾಲ್ ನಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.
ಆಮೆವೇಗದಲ್ಲಿ ಸಾಗುತ್ತಿರುವ ಜೆಪ್ಪು ಮಹಾಕಾಳಿಪಡ್ಪು ರೈಲ್ವೆ ಅಂಡರ್ ಪಾಸ್ ನಿರ್ಮಾಣ ಕಾರ್ಯ ಹಾಗೂ ವಿಪರೀತ ಸಮಸ್ಯೆಗಳಿಂದ ಕಂಗೆಟ್ಟಿರುವ ಪಾಂಡೇಶ್ವರ ರೈಲ್ವೆ ಗೇಟ್ ನ ಬಗ್ಗೆ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಿ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡುವ ಸಲುವಾಗಿ ಮತ್ತೆ ಸಂಬಂಧಪಟ್ಟ ರೈಲ್ವೆ ಇಲಾಖೆಗೆ, ಜನಪ್ರತಿನಿಧಿಗಳಿಗೆ ಮನವಿಯನ್ನು ಅರ್ಪಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಗಮನಕ್ಕೆ ತರಬೇಕೆಂದು ತೀರ್ಮಾನಿಸಲಾಯಿತು. ಈತನ್ಮಧ್ಯೆ ಆ ಭಾಗದ ಎಲ್ಲಾ ಸಂಘಸಂಸ್ಥೆಗಳನ್ನು, ಸಂಘಟನೆಗಳನ್ನು ಇತರ ಜನವಿಭಾಗದವರನ್ನು ಸೇರಿಸಿ ಬ್ರಹತ್ ಹೋರಾಟವನ್ನು ಪಾಂಡೇಶ್ವರ ರೈಲ್ವೆ ಗೇಟ್ ಬಳಿಯಲ್ಲಿ ಡಿಸೆಂಬರ್ ಮೊದಲ ವಾರದಲ್ಲಿ ನಡೆಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಸ್ಥಳೀಯ ಕಾರ್ಪೋರೇಟರ್ ಅಬ್ದುಲ್ ಲತೀಫ್ ಕಂದಕ್,ಸುನಿಲ್ ಕುಮಾರ್ ಬಜಾಲ್,ಮಾಜಿ ಉಪಮೇಯರ್ ಕವಿತಾವಾಸು, ಮುರಳೀಧರ್ ಬೋಳಾರ, ಹನುಮಂತ ಕಾಮತ್, ಅಹಮ್ಮದ್ ಭಾವ ಹೋರಾಟ ಸಮಿತಿಯ ಪ್ರಮುಖರಾದ ಜೆ ಇಬ್ರಾಹಿಂ ಜೆಪ್ಪು,ಯಾದವ ಶೆಟ್ಟಿ,ಯೋಗೀಶ್ ಜಪ್ಪಿನಮೊಗರು,ಬಿ ಕೆ ಇಮ್ತಿಯಾಜ್,ನಾಗೇಶ್ ಕೋಟ್ಯಾನ್, ಅಸುಂತ ಡಿಸೋಜ, ಪ್ರಮೀಳಾ ದೇವಾಡಿಗ,ಮಕ್ಬುಲ್ ಅಹಮ್ಮದ್,ದೇವದಾಸ್ ಪೂಜಾರಿ,ಮುತ್ತಲೀಫ್, ಮಹಮ್ಮದ್ ಹುಸೇನ್ ಬೋಳಾರ,ಸಾಲ್ವಡೋರ್ ಡಿಸೋಜ,ಗಿಲ್ಬರ್ಟ್ ಡಿಸಿಲ್ವಾ, ಲ್ಯಾನ್ಸಿ ಕ್ರಾಸ್ತಾ, ಸುರೇಶ್ ಪಾಂಡೇಶ್ವರ, ಮುನೀರ್ ಮುಕ್ಕಚೇರಿ , ಉಮನಾಥ ಕೋಟೆಕಾರ್, ಪ್ಲೇವಿ ಕ್ರಾಸ್ತಾ ಅತ್ತಾವರ, ಪದ್ಮಾವತಿ ಶೆಟ್ಟಿ, ಭಾರತಿ ಬೋಳಾರ,ನೆಲ್ಸನ್ ರೋಚ್ ಮುಂತಾದವರು ಉಪಸ್ಥಿತರಿದ್ದರು.