Connect with us

LATEST NEWS

ಮಂಗಳೂರು – ಹಾಸ್ಟೆಲ್ ಊಟ ತಿಂದು ಅಸ್ವಸ್ಥಗೊಂಡ ವಿಧ್ಯಾರ್ಥಿಗಳು

ಮಂಗಳೂರು ಫೆಬ್ರವರಿ 08: ಮಂಗಳೂರು ಹೊರವಲಯದ ವಲಚ್ಚಿಲ್ ಬಳಿಯ ಶ್ರೀನಿವಾಸ ಕಾಲೇಜಿನ ಹಾಸ್ಟೆಲ್ ಊಟ ಸೇವಿಸಿದ 30ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ನಡೆದಿದೆ.


ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿಗಳು ಹಾಸ್ಟೆಲ್​ನಲ್ಲಿ ರಾತ್ರಿ ಊಟ ಸೇವಿಸಿದ ಬಳಿಕ ಹೊಟ್ಟೆನೋವಿನಿಂದ ಒದ್ದಾಡಿದ್ದಾರೆ. ಮಂಗಳೂರು ಮತ್ತು ತುಂಬೆಯ ಆಸ್ಪತ್ರೆಗಳಿಗೆ‌ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಫೆ. 7ರ ಬುಧವಾರ ರಾತ್ರಿ ವೇಳೆ ಕೆಲ‌ ವಿದ್ಯಾರ್ಥಿಗಳಿಗೆ ವಾಂತಿ-ಭೇದಿ ಉಂಟಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಸ್ಟೆಲ್ ಗೆ ತೆರಳಿ ಪರಿಶೀಲನೆ ನಡೆಸಿದ್ದೇವೆ ಎಂದು‌ ಆರೋಗ್ಯ ಇಲಾಖೆ‌ ಅಧಿಕಾರಿಗಳು ತಿಳಿಸಿದ್ದಾರೆ.
ಬಹುತೇಕರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *