LATEST NEWS
ಮಂಗಳೂರು – ಹೃದಯಾಘಾತದಿಂದ ಯೋಧ ಹುತಾತ್ಮ

ಮಂಗಳೂರು ಜನವರಿ 01: ರಜೆ ಹಿನ್ನಲೆ ಊರಿಗೆ ಬಂದಿದ್ದ ಯೋಧರೊಬ್ಬರು ಹೃದಯಾಘಾತದಿಂದ ನಿಧನರಾದ ಘಟನೆ ಮಂಗಳೂರಿನ ಕುಲಶೇಖರದಲ್ಲಿ ನಡೆದಿದೆ.
ಮೃತರನ್ನು ಕುಲಶೇಖರ ಉಮಿಕಾನ ನಿವಾಸಿ ಹರೀಶ್ ಕುಮಾರ್ (43) ಎಂದು ಗುರುತಿಸಲಾಗಿದೆ. ಗಡಿ ಭದ್ರತಾ ಪಡೆಯಲ್ಲಿ (ಬಿಎಸ್‌ಎಫ್) ಅವರು 21ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ರಜೆ ಹಾಕಿ ಊರಿಗೆ ಬಂದಿದ್ದ ಅವರಿಗೆ ಶನಿವಾರ ಹೃದಯಾಘಾತವಾಗಿತ್ತು. ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದರು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಅವರಿಗೆ ಪತ್ನಿ, 6 ವರ್ಷದ ಪುತ್ರ ಹಾಗೂ ಒಂದುವರೆ ವರ್ಷದ ಪುತ್ರಿ ಇದ್ದಾರೆ.
