LATEST NEWS
ಮಂಗಳೂರು ಸ್ಮಾರ್ಟ್ ಸಿಟಿಯಲ್ಲಿ ರಸ್ತೆ ಮೇಲೆ ಡ್ರೈನೆಜ್ ನೀರು…!!

ಮಂಗಳೂರು ಡಿಸೆಂಬರ್ 16: ಮಂಗಳೂರು ಸ್ಮಾರ್ಟ್ ಸಿಟಿ ರಸ್ತೆಗಳಲ್ಲಿ ರಸ್ತೆ ಮೇಲೆ ಡ್ರೈನೆಜ್ ನೀರು ಹರಿಯುತ್ತಿದ್ದು, ಪಾಲಿಕೆ ಅಧಿಕಾರಿಗಳು ಜನಪ್ರತಿನಿಧಿಗಳು ನೋಡದಂತೆ ತಿರುಗಾಡುತ್ತಿದ್ದಾರೆ. ಕಳೆದ 2 ದಿನಗಳಿಂದ ಬಂಟ್ಸ್ ಹಾಸ್ಟೆಲ್ ವೃತ್ತದ ಬಳಿ ಮಲಿನ ಡ್ರೈನೇಜ್ ನೀರು ರಸ್ತೆಗೆ ಬಂದು ಹರಿಯುತ್ತಿದ್ದು ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ನರಕ ಯಾತನೆ ಅನುಭವಿಸುತ್ತಿದ್ದಾರೆ.
ಈ ನೀರಿನ ಮೇಲಿಂದಲೇ ವೇಗವಾಗಿ ಚಲಿಸುವ ಕಾರುಗಳ ಟಯರುಗಳಿಂದ ಸಿಡಿಯುವ ದುರ್ನಾತದ ನೀರಿನಿಂದ ನಡೆದು ಕೊಂಡು ಹೋಗುವ ಶಾಲಾ ಮಕ್ಕಳು, ಮಹಿಳೆಯರು, ಪಾದಚಾರಿಗಳು ಪಾಡುವ ಪಾಡು ಹೇಳತೀರದು.

ಮಲೀನ ನೀರು ರಸ್ತೆಯಲ್ಲೆಲ್ಲ ಹರಿದು ಹೋಗುತ್ತಿರುವುದರಿಂದ ಸುತ್ತಮುತ್ತಲು ದುರ್ನಾತ ಬೀರುತ್ತಿದ್ದು ವ್ಯಾಪಾರಕ್ಕೂ ತೊಂದರೆ ಆಗಿದೆ. ಅನೇಕ ಅಧಿಕಾರಿ ಜನಪ್ರತಿನಿಧಿಗಳು ಈ ರಸ್ತೆಯಲ್ಲೇ ನಿತ್ಯ ಓಡಾಡುತ್ತಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಸೋಜಿಗವೇ ಸರಿ.