LATEST NEWS
ಮಂಗಳೂರು – ರಸ್ತೆಯಲ್ಲಿ ಬಿದ್ದ ರೆಡಿಮಿಕ್ಸ್ ಕಾಂಕ್ರೀಟ್ ಕ್ಲೀನ್ ಮಾಡಿದ ಟ್ರಾಫಿಕ್ ವಾರ್ಡನ್ ಫ್ರಾನ್ಸಿಸ್ ಮ್ಯಾಕ್ಸಿಮ್ ಮೊರಾಸ್

ಮಂಗಳೂರು ಮಾರ್ಚ್ 23: ಮಂಗಳೂರು ಪದುವ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ರೆಡಿಮಿಕ್ಸ್ ವಾಹನವೊಂದು ನಿರ್ಲಕ್ಷದಿಂದ ರಸ್ತೆಯಲ್ಲಿ ಕಾಂಕ್ರಿಟ್ ಬಿಳಿಸಿ ಹೊದ ಘಟನೆ ನಡೆದಿದ್ದು, ಅದನ್ನು ಹಿರಿಯ ಜೀವ ಟ್ರಾಫಿಕ್ ವಾರ್ಡನ್ ಫ್ರಾನ್ಸಿಸ್ ಮ್ಯಾಕ್ಸಿಮ್ ಮೊರಾಸ್ ಪೊರಕೆಯೊಂದನ್ನು ತಂದು ರಸ್ತೆಯನ್ನು ಸ್ವಚ್ಛಗೊಳಿಸಿದ್ದಾರೆ.
ಮಂಗಳೂರಿನಲ್ಲಿ ಕಾಂಕ್ರಿಟ್ ಮಿಕ್ಸರ್ ವಾಹನಗಳು ನಿರ್ಲಕ್ಷದಿಂದ ಕಾಂಕ್ರೀಟ್ ನ್ನು ರಸ್ತೆ ಬದಿ ಬೀಳಿಸುತ್ತಿರುವ ಘಟನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಪದುವ ಬಳಿ ಕಾಂಕ್ರಿಟ್ ಮಿಕ್ಸರ್ ಲಾರಿಯಿಂದ ರಸ್ತೆ ಮೇಲೆ ಕಾಂಕ್ರಿಟ್ ಮಿಕ್ಸರ್ ಬಿದ್ದ ಪರಿಣಾಮ ದ್ವಿಚಕ್ರ ವಾಹನವೊಂದು ಸ್ಕೀಡ್ ಆಗಿದ ಘಟನೆ ನಡೆದಿದೆ. ಈ ವೇಳೆ ಅಲ್ಲಿ ಟ್ರಾಫಿಕ್ ವಾರ್ಡನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ವಾರ್ಡನ್ ಫ್ರಾನ್ಸಿಸ್ ಮ್ಯಾಕ್ಸಿಮ್ ಮೊರಾಸ್ ತಕ್ಷಣವೇ ಎಚ್ಚರ ವಹಿಸಿ ಪೊರಕೆಯೊಂದನ್ನು ತಂದು ರಸ್ತೆಯನ್ನು ಸ್ವಚ್ಛಗೊಳಿಸಿ ತನ್ನ ಪ್ರಾಮಾಣಿಕ ಸೇವೆಗಾಗಿ ಸಾರ್ವಜನಿಕರ ಪ್ರಶಂಗೆ ಪಾತ್ರರಾದರು.

ರೆಡಿಮಿಕ್ಸ್ ಲಾರಿಗಳು ನಿರ್ಲಕ್ಷದಿಂದ ಕಾಂಕ್ರೀಟ್ ನ್ನು ರಸ್ತೆ ಬದಿ ಬೀಳಿಸುತ್ತಿರುವ ಘಟನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು ಇದಕ್ಕೂ ಮೊದಲು ನಗರದ ಎಂ.ಜಿ. ರಸ್ತೆಯುದ್ದಕ್ಕೂ ಸಿಮೆಂಟ್ ಮಿಕ್ಸ್ ಮಾಡಿದ ಕಾಂಕ್ರೀಟನ್ನು ಚೆಲ್ಲಿ ಹೋದ ಸಿಮೆಂಟ್ ಮಿಕ್ಸರ್ ಲಾರಿಯನ್ನು ಹಿಂಬಾಲಿಸಿಕೊಂಡು ಹೋಗಿ ಹಂಪನಕಟ್ಟೆಯಲ್ಲಿ ತಡೆದು ನಿಲ್ಲಿಸಿ ಅದರ ಚಾಲಕನನ್ನು ಗೃಹರಕ್ಷಕದಳದ ಪ್ಲಟೂನ್ ಕಮಾಂಡರ್ ಮಾರ್ಕ್ ಸೆರಾ ಕರೆ ತಂದು ಚೆಲ್ಲಿದ ಕಾಂಕ್ರೀಟನ್ನು ತೆರವುಗೊಳಿಸಿದ ಘಟನೆ ಮಾ. 21ರಂದು ನಡೆದಿದೆ.