LATEST NEWS
ನವಮಂಗಳೂರು ಬಂದರಿಗೆ ಬಂದ ಬಹೇಮಿಯನ್ ಪ್ರವಾಸಿ ಹಡಗು ಸೆವೆನ್ ಸೀಸ್ ವೊಯೇಜರ್
ಮಂಗಳೂರು ಡಿಸೆಂಬರ್ 28: ನವಮಂಗಳೂರು ಬಂದರಿಗೆ ಬಹೇಮಿಯನ್ ಪ್ರವಾಸಿ ಹಡಗು ಸೆವೆನ್ ಸೀಸ್ ವೊಯೇಜರ್ ಪ್ರವಾಸಿ ನೌಕೆ ಆಗಮಸಿದೆ. ಈ ಹಡಗು ಈ ಋತುವಿನಲ್ಲಿ ಬರುತ್ತಿರುವ ಎರಡನೇ ಹಡಗಾಗಿದೆ.
ನಾರ್ವೆಯ ಕ್ರೂಸ್ ಲೈನ್‌ನ ಈ ಹಡಗು ಶುಕ್ರವಾರ ಬೆಳಿಗ್ಗೆ 6.30ಕ್ಕೆ ಬಂದರಿಗೆ ಬಂದಿದ್ದು, ಅದರಲ್ಲಿ 650 ಪ್ರಯಾಣಿಕರು, 450 ಸಿಬ್ಬಂದಿ ಇದ್ದರು. ಈ ಹಡಗು ಫುಝರ್‌ನಿಂದ ಮುಂಬೈ, ಗೋವಾ, ಮಂಗಳೂರು, ಕೊಚ್ಚಿ ಮೂಲಕ ಕೊಲಂಬೊಗೆ ಸಂಜೆ 5.30ಕ್ಕೆ ವಾಪಸಾಯಿತು.
ಪ್ರವಾಸಿಗರನ್ನು ಭಾರತೀಯ ಸಂಪ್ರದಾಯದಂತೆ ಸ್ವಾಗತಿಸಲಾಯಿತು. ಸ್ಥಳೀಯ ಪ್ರಮುಖ ತಾಣಗಳಾದ ಕಾರ್ಕಳದ ಬಾಹುಬಲಿ, ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಸೋನ್ಸ್ ಫಾರ್ಮ್, ಕಲ್ಬಾವಿ ಗೋಡಂಬಿ ಕಾರ್ಖಾನೆ, ಗೋಕರ್ಣನಾಥ ದೇವಸ್ಥಾನ ಹಾಗೂ ಸ್ಥಳೀಯ ಮಾರುಕಟ್ಟೆಗೆ ಪ್ರವಾಸಿಗರು ಭೇಟಿ ನೀಡಿದರು.