Connect with us

    LATEST NEWS

    ಮಂಗಳೂರು – ಟಯರ್ ಸಿಡಿದು ಮೀನು ಸಾಗಾಟದ ಪಿಕಪ್ ಪಲ್ಟಿ

    ಉಳ್ಳಾಲ ಸೆಪ್ಟೆಂಬರ್ 25 : ಮೀನು ಸಾಗಾಟ ಮಾಡುವ ಪಿಕಪ್ ವಾಹನದ ಟಯರ್ ಬ್ಲ್ಯಾಸ್ಟ್ ಆದ ಕಾರಣ ಪಿಕಪ್ ಪಲ್ಟಿಯಾದ ಘಟನೆ ನೇತ್ರಾವತಿ ಸೇತುವೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪಿಕಪ್ ವಾಹನ ಪಲ್ಟಿಯಾಗಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೆ ತೊಂದರೆಯಾಯಿತು.


    ಮಲ್ಪೆ ಬಂದರಿನಿಂದ ಉಳ್ಳಾಲ ಆಯಿಲ್ ಮಿಲ್​ಗೆ ಮೀನು ಸಾಗಾಟ ನಡೆಸುವ ವಾಹನ, ನೇತ್ರಾವತಿ ಸೇತುವೆ ತಲುಪುತ್ತಿದ್ದಂತೆ ಎದುರುಗಡೆಯ ಟಯರ್ ಸಿಡಿದಿದೆ. ಪರಿಣಾಮ ಒಂದು ದಿಕ್ಕಿನತ್ತ ತೆರಳಿದ ಪಿಕಪ್ ವಾಹನ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

    ಘಟನೆಯಲ್ಲಿ ಪಿಕಪ್ ವಾಹನ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಇನ್ನು ವಾಹನದಲ್ಲಿದ್ದ ಮೀನುಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

    Share Information
    Advertisement
    Click to comment

    You must be logged in to post a comment Login

    Leave a Reply