LATEST NEWS
ಕಚೇರಿಯಲ್ಲೇ ನೇಣಿಗೆ ಶರಣಾದ ಪಿಡಿಓ

ಕಚೇರಿಯಲ್ಲೇ ನೇಣಿಗೆ ಶರಣಾದ ಪಿಡಿಓ
ಮಂಗಳೂರು ಜೂನ್ 13: ಪಂಚಾಯತ್ ಪಿಡಿಓ ಒಬ್ಬರು ಕಚೇರಿಯ ಶೌಚಾಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲದಲ್ಲಿ ನಡೆದಿದೆ.
ಉಳ್ಳಾಲ ಮುನ್ನೂರು ಪಂಚಾಯತ್‌ನ ಪಿಡಿಓ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕೃಷ್ಣ ಸ್ವಾಮಿ ಬಿ,ಎಸ್ ಆತ್ಮಹತ್ಯೆಗೈದ ಪಿಡಿಓ ಆಗಿದ್ದು, ಕಚೇರಿಯ ಶೌಚಾಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೃಷ್ಣಸ್ವಾಮಿ ಮೂಲತ: ಧರ್ಮಸ್ಥಳ ಕೊಕ್ಕಡ ನಿವಾಸಿ ಎಂದು ತಿಳಿದು ಬಂದಿದ್ದು, ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿದ್ದು ಅದರಲ್ಲಿ ಅನುಕಂಪದ ಆಧಾರದಲ್ಲಿ ಪತ್ನಿ ಅಥವಾ ಮಕ್ಕಳಿಗೆ ಸರಕಾರಿ ಕೆಲಸ ಒದಗಿಸುವಂತೆ ಮನವಿ ಮಾಡಿದ್ದು, ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿದ್ದಾರೆ.