LATEST NEWS
ಮಂಗಳೂರು ನಗರಕ್ಕೆ ನವೆಂಬರ್ 12 ರಿಂದ ಮೂರು ದಿನ ನೀರಿಲ್ಲ…!!
ಮಂಗಳೂರು ನವೆಂಬರ್ 10: ಮಂಗಳೂರು ಮಹಾನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆಯಲ್ಲಿ 2ನೇ ಹಂತದ ದುರಸ್ಥಿ ಕಾರ್ಯನಡೆಯುವುದರಿಂದ ನವೆಂಬರ್ 12 ರಿಂದ ನವೆಂಬರ್ 14 ರವರೆಗೆ ಬಾಗಶಃ ಮಂಗಳೂರು ನಗರಕ್ಕೆ ನೀರಿನ ವ್ಯತ್ಯಯವಾಗಲಿದೆ ಎಂದು ಪಾಲಿಕೆ ಪ್ರಕಟಣೆ ತಿಳಿಸಿದೆ.
ತುಂಬೆಯಲ್ಲಿ ರೇಚಕ ಸ್ಥಾವರದ ಜಾಕ್ವೆಲ್ ದುರಸ್ತಿ ಕಾಮಗಾರಿ ನಡೆಯುತ್ತಿರುವುದರಿಂದ ನವೆಂಬರ್12ರಂದು ಬೆಳಗ್ಗೆ 6 ರಿಂದ ನವೆಂಬ್ 14ರ ಬೆಳಗ್ಗೆ 6 ರವರೆಗೆ ಸುರತ್ಕಲ್, ಕಾಟಿಪಳ್ಳ, ಎನ್ಐಟಿಕೆ, ಎಂಸಿಎಫ್, ಕೂಳೂರು, ಕಾವೂರು, ಕೋಡಿಕಲ್ ಭಾಗಶಃ, ಪಿವಿಎಸ್, ಲೇಡಿಹಿಲ್, ಬಂದರ್, ಕಾರ್ಸ್ಟ್ರೀಟ್, ಕುದ್ರೋ ಳಿ, ಬೋ ಳೂರು, ಮೇರಿಹಿಲ್, ಪಚ್ಚನಾಡಿ, ಅಶೋ ಕ ನಗರ, ದೇರೆಬೈಲ್, ಕೋಡಿಯಾಲ್ ಬೈಲ್ ಹಾಗೂ ಕದ್ರಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮನಪಾ ಕಾರ್ಯಪಾಲಕ ಅಭಿಯಂತರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.