Connect with us

LATEST NEWS

ಮಂಗಳೂರು – ಮೇಯರ್ ಆಗಿ ಜಯಾನಂದ್ ಅಂಚನ್ ಹಾಗೂ ಉಪಮೇಯರ್ ಆಗಿ ಪೂರ್ಣಿಮಾ ಆಯ್ಕೆ

ಮಂಗಳೂರು ಸೆಪ್ಟೆಂಬರ್ 09: ಮಂಗಳೂರಿನ ನೂತನ ಮೇಯರ್ ಆಗಿ ಜಯಾನಂದ್ ಅಂಚನ್ ಹಾಗೂ ಉಪಮೇಯರ್ ಆಗಿ ಪೂರ್ಣಿಮಾ ಆಯ್ಕೆಯಾಗಿದ್ದಾರೆ,


ಇಂದು ನಡೆದ ಮೇಯರ್ ಚುನಾವಣೆಲ್ಲಿ ಕದ್ರಿ ಬಿ.ವಾರ್ಡ್ ನ ಪಾಲಿಕೆ ಸದಸ್ಯರಾಗಿರುವ ಜಯಾನಂದ ಅಂಚನ್ ಪಾಲಿಕೆ‌ ಸದಸ್ಯರಾಗಿ ಎರಡನೇ ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಪ ಮೇಯರ್ ಆಗಿ ಸೆಂಟ್ರಲ್ ವಾರ್ಡ್ ನ ಪೂರ್ಣಿಮಾ ಆಯ್ಕೆಯಾದರು.

ಕಳೆದ ಸಾಲಿನಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಂಗಳಾದೇವಿ ವಾರ್ಡ್ ನ ಸದಸ್ಯ ಪ್ರೇಮಾನಂದ ಶೆಟ್ಟಿ ಮೇಯರ್ ಆಗಿದ್ದರು. ಹಾಗಾಗಿ ಈ ಬಾರಿ ಬಿಜೆಪಿಯು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸದಸ್ಯರಿಗೆ ಮೇಯರ್ ಹುದ್ದೆ ನೀಡಿದೆ. ಕಳೆದ ಸಲ ಬಂಟ ಸಮುದಾಯದ ಅಭ್ಯರ್ಥಿಗೆ ಅವಕಾಶ ನೀಡಿದ್ದ ಬಿಜೆಪಿ ಈ ಬಾರಿ ಬಿಲ್ಲವ ಸಮುದಾಯದವರಿಗೆ ಮೇಯರ್ ಹುದ್ದೆ ನೀಡಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *