Connect with us

LATEST NEWS

ಅಕ್ಟೋಬರ್ 1 ರಿಂದ ಮಂಗಳೂರು-ಮುಂಬೈ ಏರ್ ಇಂಡಿಯಾ ವಿಮಾನ ಸೇವೆ ಪುನರಾರಂಭ

ಅಕ್ಟೋಬರ್ 1 ರಿಂದ ಮಂಗಳೂರು-ಮುಂಬೈ ಏರ್ ಇಂಡಿಯಾ ವಿಮಾನ ಸೇವೆ ಪುನರಾರಂಭ

ಮಂಗಳೂರು ಅಗಸ್ಟ್ 8: ಸಂಸದ ನಳಿನ್ ಕುಮಾರ್ ಕಟೀಲ್ ಇವರ ಇಂದು ಕೇಂದ್ರ ನಾಗರೀಕ ವಿಮಾನಯಾನ ಸಚಿವರಾದ ಸುರೇಶ್ ಪ್ರಭು ಅವರನ್ನು ಭೇಟಿ ಮಾಡಿ ಈ ಹಿಂದೆ ಮಂಗಳೂರು-ಮುಂಬೈ (ಐಸಿ1680) ಹಾಗೂ ಮುಂಬೈ-ಮಂಗಳೂರು (ಐಸಿ1679) ಏರ್ ಇಂಡಿಯಾ ವಿಮಾನ ಸಂಚಾರವನ್ನು ಪುನರಾರಂಭಿಸುವಂತೆ ಸಚಿವರಿಗೆ ಮನವಿಯನ್ನು ಸಲ್ಲಿಸಿದರು.

ಮಂಗಳೂರು ಹಾಗೂ ಮುಂಬೈ ನಗರಗಳು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಾಗಿದ್ದು ಈ ನಗರಗಳಲ್ಲಿ ಅನೇಕ ಬೃಹತ್ ಉದ್ದಿಮೆಗಳು, ಸಾಫ್ಟವೇರ್ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ದಿನ ನೂರಾರು ಪ್ರಯಾಣಿಕರು ಮಂಗಳೂರು-ಮುಂಬೈ ನಡುವೆ ಪ್ರಯಾಣಿಸುತ್ತಿದ್ದಾರೆ. ಇಲ್ಲಿನ ಉದ್ಯಮಿಗಳು, ಉದ್ಯೋಗಿಗಳು ಅಲ್ಲದೇ ದೇಶ ವಿದೇಶದ ಪ್ರವಾಸಿಗರಿಗೆ ಈ ವಿಮಾನ ಸೇವೆಯು ಅನುಕೂಲವಾಗಲಿದೆ ಎಂದು ಮನವಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಒತ್ತಾಯಿಸಿರುತ್ತಾರೆ.

ಸಂಸದರ ಮನವಿಯಂತೆ ಮಾನ್ಯ ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಮಂಗಳೂರು-ಮುಂಬೈ (ಐಸಿ1680) ಹಾಗೂ ಮುಂಬೈ-ಮಂಗಳೂರು (ಐಸಿ1679) ಏರ್ ಇಂಡಿಯಾ ವಿಮಾನ ಸಂಚಾರವನ್ನು ಅಕ್ಟೋಬರ್ 1 ರಿಂದ ಪುನರಾರಂಭಿಸುವಂತೆ ಅಧಿಕಾರಿಗಳಿಗೆ ಸಚಿವರು ಆದೇಶ ನೀಡಿದರು.

ಇದಲ್ಲದೇ ಸಂಸದರು ಮಂಗಳೂರು-ಪುಣೆ ನಡುವೆ ಹೊಸ ವಿಮಾನ ಸೇವೆ ಪ್ರಾರಂಭಿಸುವಂತೆಯೂ ಸಚಿವರನ್ನು ಕೋರಿದರು. ಈ ಹೊಸ ಸೇವೆಯನ್ನು ಪ್ರಾರಂಭಿಸಿದಲ್ಲಿ ಎರಡು ನಗರಗಳ ಸಂಪರ್ಕ ವೃದ್ಧಿಯಾಗಲಿದೆ ಎಂದು ಸಂಸದರು ಮನವಿಯಲ್ಲಿ ತಿಳಿಸಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *